Saturday, May 14, 2011

....ಮತ್ತು ಪ್ರೀತಿ

ಎನಗೆ ಸಾವಿಲ್ಲವೇ ,ಬರಿ ರೂಪಾಂತರವಷ್ಟೇ.......!!!
ಕಣ್ಣೀರ ಹನಿಯಾಗ್ತೇನೆ ,ಇಲ್ಲಾ ಚರಿತ್ರೆಯ ಪುಟಗಳಾಗುತ್ತೇನೆ,
ಯಾರದ್ದೋ ನಗುವಿನ ಕಾರಣವಗ್ತೇನೆ...,,,,
ಇಲ್ಲಾ ಎಲ್ಲಾದರೂ ರಕ್ತದ ಕಲೆಯಾಗ್ತೇನೆ..,,

ಎನಗೆ ಸಾವಿಲ್ಲವೂ ..,,

ರಕ್ತವಾಗಿ ,ಜೀವವಾಗಿ ,ಹನಿ ಹನಿ
ಮಳೆಯ ನಡುವೆ ತಣ್ಣೀರ ಭಾವವಾಗಿ ,
ಅನಾಮಿಕ ಹುಡುಗಿಯ ಕನಸಿನ ಚಿತ್ರವಾಗಿ ,
ತುಂಟ ತುಟಿಗಳ ನಡುವೆ ಸ್ಪರ್ಶವಾಗಿ ..,,!!

ಬರಿ ರೂಪಾಂತರವಷ್ಟೇ...!!!

ಲೇಖನಿಯ ತುದಿಯ ಮೌನವಾಗಿ ,.
ಮಿಲನ ಸುಖದ ಮೂಲವಾಗಿ .,
ಹಲವು ಭಾವಗಳಿಗೆ ವ್ಯಕ್ತಪ್ರಜ್ಞೆಯಾಗಿ ,
ಗೆಜ್ಜೆಯಾಗಿ .,ಹೆಜ್ಜೆಯಾಗಿ ..,ಕಣ್ಣರೆಪ್ಪೆಯ ಸದ್ದಾಗಿ
ತರುಣ ಮನಸಿನ ಪಿಸುಮಾತಾಗಿ .

ನಾನು ಪ್ರಿತಿಯಾಗ್ತೇನೆ ....

ತೋಳಹಾರವಾಗಿ,ಕೆನ್ನೆಯಾ ಕೆಂಪಾಗಿ .
ನಾಚುವ ಮನಸಿನ ,ಕಾಣುವ ಕನಸಿನ
ಕನಚಿನ ನೋಟದ .,ಪ್ರತಿಮುತ್ತಿನ ಹಂಬಲಕೆ ಕಾರಣವಾಗಿ

ಪ್ರೀತಿಯೇ ನಾನಾಗ್ತೇನೆ............

3 comments:

  1. ತು೦ಬ ಸೊಗಸಾಗಿದೆ...ಶ್ರೀಪಾದ, ನಿಮ್ಮ ಕಲ್ಪನೆ ಮತ್ತು ಪದಬ೦ಧನ ಆಹ್ಲಾದಕರವಾಗಿದೆ...

    "ಕಣ್ಣರೆಪ್ಪೆಯ ಸದ್ದಾಗಿ / ಕೆನ್ನೆಯಾ ಕೆಂಪಾಗಿ / ನಡುವೆ ಸ್ಪರ್ಶವಾಗಿ / ಯಾರದ್ದೋ ನಗುವಿನ ಕಾರಣವಗ್ತೇನೆ" ಸೊಗಸಾಗಿದ್ದು.

    ಶುಭಾಶಿರ್ವಾದಗಳೊ೦ದಿಗೆ ಇತಿ ಪ್ರೀತಿಯ, ಗ೦ಗಣ್ಣ.

    ReplyDelete
  2. super shreepadu.... kalpanegalu adbhuthavagiddu..

    ReplyDelete