ಹೆಸರೇ ಇಲ್ಲದ ಊರಿಗೆ ಒಂಟಿ ಕಂಬಿಯ ರೈಲು
ಬೋಗಿಯ ಒಳಗೆ ಬಿಕರಿಗೆ ಉಂಟೇ ಕೈಗೆ ಸಿಕ್ಕದ
ಬೆಂಕಿಯ ಹೂವು ?
ಮುಚ್ಚದ ಕಿಟಕಿಯ ಕಣ್ಣೊಳಗೆ ಉದ್ದಾನುದ್ದ ಬಯಲು
ಹಾರುವ ಈಪ್ಸೆಗೆ ಕಾಲು ಕಟ್ಟಿದೆಯೇ ಎರಡು ಮಂಡೆಯಾ
ಕೆಂಪನೆ ಹಾವು ?
ನಿಲ್ಲದ ಗಾಡಿಗೆ ಹತ್ತುವರ್ಯಾರೋ , ಇಳಿಯುವರ್ಯಾರೋ
ಕೊಲ್ಲುವರ್ಯಾರೋ , ಕೂರುವರ್ಯಾರೋ ಗೊತ್ತೇ ಇಲ್ಲ
ಕತ್ತಲ ರಾತ್ರಿ ಮಗ್ಗುಲು ಬದಲಿಸೆ ಚುಚ್ಚಿದ್ಯಾವದು
ಹೂವ ! ಮುಳ್ಳ ?
ಕೋರಿ ಸೆಟ್ಟಿಯಾ ಬುಟ್ಟಿಯ ಒಳಗೆ ಕಟ್ಟುಗಟ್ಟಲೆ ಹಳವಂಡ
ಕೊಟ್ಟು ಕಸಿಯುವ ಯಾಪಾರಕ್ಕೆ ಎಲ್ಲಾ ತುಟ್ಟಿ ,ನೆಂಟೇ ಅಗ್ಗ
ಎನ್ನೆಯ ತಾವು ಮೀಸಲಿಗುಂಟು ಮುಂದಿನ ತಾಣದಿಯಾದರೂ
ಹತ್ತುವೆಯೇನೋ ನನ್ನಯನಲ್ಲ ?