Saturday, May 14, 2011

ಅವಳು ಮತ್ತು ಕನಸು

ನಿನ ಮುಂಗುರುಳ ಕೊಂಕಲ್ಲಿ .,ಆ ತುಟಿಯ ಅಂಚಲ್ಲಿ
ಆ ಮುತ್ತ ಮತ್ತಲ್ಲಿ .,ಬಿಸಿ ಉಸಿರ ಅಪ್ಪುಗೆಯಲ್ಲಿ
ಆ ಸ್ಪರ್ಶದ ಕನಸಲ್ಲಿ.,ಕನಸ ಕನವರಿಕೆಯಲ್ಲಿ  ನಾ ಕರಗಿ ಹೋಗುವ ಮುನ್ನ
ಅಕ್ಷರೂವನಿತೆಯಾಗೆ ಪ್ರಿಯೆ ., ನನ ರಕ್ತದ ಹನಿ ಹನಿಯಲ್ಲಿ

ಮಿಲನ ಸುಖದ ಮೂಲದಲಿ ., ಮನಸ ಹುಚ್ಚುಕೋಡಿಯಲಿ
ಪ್ರೇಮಪತ್ರದ ಅಕ್ಷರದಲಿ..ಆ ಅಕ್ಷರದ ಭಾವದಲಿ
ನಿನ ಕಾಲ ಕಿರುಬೆರಳಿಗೆ ನಾ ಮುತ್ತಿಟ್ಟ ಅನುಭಾವದಿ
ನೀ ಕರುಗುವ ಮುನ್ನ ., ಹುಡುಗಿ ಕಾಡಿಬಿಡು ಒಮ್ಮೆ
ನನ ಎದೆಯ ಪ್ರತಿಮಿಡಿತದಲಿ

ಕಣ್ಣಿರ ಸ್ಪರ್ಶದಲಿ ..,ಮಳೆಯ ಪ್ರತಿ ಹನಿಯಲ್ಲಿ
ಕೆನ್ನೆಯ ಕೆಂಪಲ್ಲಿ.., ಕಾಲ್ಗೆಜ್ಜೆಯ ಸದ್ದಲ್ಲಿ
ಭಾವ ಭಾವಗಳ ವ್ಯಕ್ತ ಪ್ರಜ್ಞೆಯಲಿ
ನಾ ಕಾಣುವ ಸ್ವಪ್ನದ ಮೂರ್ತ ರೂಪದಲಿ
ಒಮ್ಮೆ ನನ್ನವಳಾಗಿಬಿಡು ಬಿಡು ಗೆಳತಿ .. ಈ ಪ್ರೀತಿ ಸಾಯುವ ಮುನ್ನ

ಪ್ರಿತಿಸಿಯೂ ಪ್ರಿತಿಸದ ಮನಸಿಗೆ.,ಮತ್ತೆ ಪ್ರೀತಿಸುವೆ ಎಂಬ ಭ್ರಮೆಗೆ  
ಪ್ರಾಣಕಾಂತನ  ಮನಸಿನ ಪುಟದಲಿ ಹಸ್ತಾಕ್ಷರವನ್ನಿತ್ತ ತಪ್ಪಿಗೆ
ಬಂದುಬಿಡು ಮತ್ತೊಮ್ಮೆ ..ಕಾಡಿಬಿಡೆ ಮನದನ್ನೆ

2 comments:

  1. Repeated elsewhere...The same words used again in almost similar fashion is boring brother.

    ReplyDelete
  2. ಧನ್ಯವಾದ ಗಂಗಣ್ಣ.ಪ್ರಾರಂಬಿಕ ಹಂತದಲ್ಲಿನ ಕವನಗಳು ಇವು .ಸರಿಸುಮಾರು ೨ ವರ್ಷದ ಹಿಂದೆ ಬರೆದಿದ್ದು. ತಿದ್ದಿ ಕೊಳ್ತಿ

    ReplyDelete