Wednesday, May 18, 2011

ಒಂದಿಷ್ಟು ಅಸ್ಪಷ್ಟ ಪದಗಳು

ಮನಸ ಹಗೇವಿನಲಿ ಅಡ ಮಾಡಿ
ಕುದಿಯುತಿಹ ನೋವು
ಬೆಂದ ಅಡಕೆಯ ಕಣ್ಣು ಬಿಟ್ಟಂತೆ
ಕಳಚಿಟ್ಟು ಹೋದ ನೆನಪು

ಗಿಡ ಮಾಡಿ ನೆರಳಿತ್ತು,ಬಸಿರಂತೆ
ಕಾಪಿಟ್ಟು,ಸಿಂಗಾರ ಶೃಂಗಾರ ಮಾಡಿ
ನಿಂತಿಹ ಮರದ ಬೇರು ಸತ್ತಿಹ ವಾಸನೆ
ಬದುಕ ಬಲ್ಲದೆ ಜೀವ ಪಸಲ ಹೊತ್ತು

ನೇದಿಟ್ಟ ಹೂವು ತನಗಲ್ಲವೆಂದು
ಸ್ಪರ್ಶ ಪ್ರೀತಿಯ ಸಾಂದ್ರಕೆ
ಕ್ಷಯವಿತ್ತೆ ಹೂವಾಡಗಿತ್ತಿ
ಕೈ ಸೋತಿತೇಕೆ ನಿನಗೆ??

ಹಣ್ಣಾದ ಕಾಲಕೆ ಎಲೆ ಉದುರುವಾಗ
ಯಾರು ಹೊಣೆ ಅದಕೆ,ಹಿಡಿಯ
ರಿಯದ ತರುವೋ
ತೂರಿಬಿಟ್ಟ ಗಾಳಿಯೋ,ಕೈಬಿಟ್ಟ ಎಳೆಯೋ??

2 comments:

  1. ಸೂಪರ್ ಶ್ರೀಪಾದಣ್ಣಾ... ಒಳ್ಳೆದಿದ್ದು.. ಹಗೇವು ಹೇಳಿದರೆ ??

    ReplyDelete
  2. ಹಗೇವು ಅಂದರೆ ಪಣತ.ಉಗ್ರಾಣ :)

    ReplyDelete