Monday, July 2, 2012

., . ಮಳೆ -ಕಾಲ

ಅರ್ಧಂಬರ್ದ ಮಳೆ ಬಂದು ನಿಂತ ನಮ್ಮೊರಿನ ಬಸ್ ಸ್ಟ್ಯಾಂಡ್ ಇಳಿದು  ನೋಡಿದಕೂಡಲೇ ಹಸಿರೆಲ್ಲ ಮೈಯಲ್ಲಿ  ಎಂತದೋ ರೋಮಾಂಚನ.ಬೆಂಗಳೂರಿನ  ಮಣ್ಣಿಗೆ ಅದರ ವಾಸನೆಗೆ ಅಲ್ಲಿನ ಪಿರಿ ಪಿರಿ ಮಳೆಗೆ  ಇಲ್ಲದ ಎಂತದೋ ಅದೃಶ್ಯ ಸೆಳೆತ ಈ ಬೆಳಗಿನ ಮಳೆಗೆ.ಮಳೆಯ ಹನಿ ಎದೆಯೊಳಗೆ ಇಳಿದು ತೊಯ್ದಂತ ಭಾವ.ಹಸಿ ಹಸಿರು ಮರಗಳ ಮಧ್ಯ ಕೊನೆಯೇ ಇಲ್ಲದೆ ಚಳಿಗೆ ಹೊದೆದು ಮಲಗಿಬಿಟ್ಟಿರುವ ನೀಲಿ ನೀಲಿ ರೋಡು.

ಅಖಂಡ ಇಪ್ಪತ್ತು ವರ್ಷಗಳ ಕಾಲ ಇದೆ ಮಳೆಯ , ಇದೆ ಕೆಸರಿನ ತೊಯ್ದೂ ತೊಯ್ಯದ ಕೊಡೆಯ ಸೂಡಿನ ನಡುವೆಯೂ ನೆಡೆದು ಬದುಕ ಕಂಡಿದ್ದರೂ ಎಂದೂ ಆಗದ ಅನುಭವ ಖಾಲಿ ಕೇವಲ ೨ ವರ್ಷಗಳ ಬೆಂಗಳೂರಿನ ಬದುಕು ನಮ್ಮ ದೃಷ್ಟಿಕೋನದ ದಿಕ್ಕನ್ನೇ ಬದಲಿಸಿಬಿಡುವ ವಿಸ್ಮಯದ ಬಗ್ಗೆ ಸಣ್ಣ ನಗು

ಇಷ್ಟಿಷ್ಟು ದುಡ್ಡು ಕೊಟ್ಟು ಬದುಕ ಕಟ್ಟುವ ಬೆಂಗಳೂರಿನ ಬಗೆಗೆ ಅನಿವಾರ್ಯ ಮೆಚ್ಚಿಗೆ ಜೊತೆ ಜೊತೆಗೆ ., ಮೈ ಮನವ ತಂಪು ಮಾಡುವುದು ಕೇವಲ ಹುಡುಗಿಯರ  ಅರ್ಧ ಮುಕ್ಕಾಲು ಮಿಡಿಗಳಷ್ಟೇ ಎಂಬಷ್ಟರ ಮಟ್ಟಿಗೆ ಸಂವೇದನೆ ಹಳ್ಳ ಹತ್ತಿಸಿದ ಊರಿನ ಮೇಲೆ ತಾತ್ಸಾರ ಬೇರೆ.

ಮನೆ ಬಂತು. ಇನ್ನೊಂದಿಷ್ಟು  ನೆನಪಿನೊಂದಿಗೆ .ಚಂದನಳ ಶ್ರೀಪದಕಕ್ಕ ಬಂದಾ ಎಂಬ ಕೂಗಿನೊಂದಿಗೆ.


2 comments:

  1. Wow... Yantrika badukina artha poorna saalugau...

    ReplyDelete
  2. ಶ್ರೀಪದಕಕ್ಕ... ನಮ್ಮೂರೇ ನಮ್ಗೆ ಚಂದ.... ಯಾಂತ್ರಿಕ ಬದ್ಕು ಎಲ್ಲಾ ಮರ್ಸಿತ್ತು... ನೆನಪಾತು ಒಂದ್ಸಲಿ... ಮಳೆಲಿ ಕೊಡೆ ಹಿಡ್ಕಂಡು ಅಂಗಿ ವದ್ದೆ ಮಾಡ್ಕ್ಯಂಡು ಶಾಲಿಗೆ ಹೋಗಿದ್ದೆಲ್ಲಾ...!!

    ReplyDelete