Monday, May 14, 2012

ಚಿಲ್ಲರೆ ಕವನಗಳು

ಕಳೆದುಹೊಗಲೊಮ್ಮೆ ನಾನು ಅವಳ ಕಣ್ಣ ಕಾಡಿಗೆ !!
ರಕ್ತ ಚಿಮ್ಮಲೆಂದು ಕುಳಿತ ಆ ಕಪೋಲವೆನ್ನ ದಂತಕೆ??

ಹುಬ್ಬಿಗುಬ್ಬ ಸೇರಿಸಿಟ್ಟು ಹಣಾಹಣಿಗೆ ಸಿದ್ದವೇ ??
ಚಳಿಗಾಲ ಬೆಚ್ಚಗೆಂದು ಸಮ್ಮತಿಸಲು ಪಂದ್ಯವೇ !!

ನಾಲಿಗೆಗಳ  ಯುದ್ದಕೆ ನಾಸಿಕವದು ಅಡ್ಡಿಯೇ??
ಅಧರ ಮಧುರ ಸ್ಪರ್ಶಪದರ  ಮುಂದಿನದಕೆ ಒಸಗೆಯೇ !!

ಮುರಿದ ಕುರುಳು ಅಡ್ಡ ಬರಲು ಕುತ್ತಿಗೆಗೆ ಶಿಕ್ಷೆಯೇ
ಕತ್ತೆತ್ತಿ ನೋಡಿದೊಡನೆ ಬಿತ್ತೆ ದಂತ ಮುದ್ರಿಕೆ ??

ಕಾಡಿನೊಳಗೆ ಹೋದ ಮುಗುದ ಹಣೆಯಚಂದ್ರನಳಿಸಿದ
ಕಾಮದೊಡಲ ಬುಟ್ಟಿಯಿಂದ ಪ್ರೇಮಚಂದ್ರ ಉದಿಸಿದ :)

4 comments:

  1. ಅಬ್ಬಾ ಗುಂಡಾ...! ಭಾರಿ romantic ಕವನ.... sooooper.... ರಾಶಿ ಇಷ್ಟ ಆತು... :) :)
    ಏನೋ ಡೌಟು ನಂಗೆ ಗುಂಡ.... :P

    ReplyDelete
  2. ಸೂಪರೋ ಗುಂಡಣ್ಣ.. ಯೋಚ್ನೆ ಮಾಡ್ತಾ ಹೋದ್ರೆ ಭಾರೀ ಅರ್ಥ ಹೊಳ್ಯಕ್ಕಿಡಿತೋ ನಿನ್ನ ಕವನದಲ್ಲಿ ಗುಂಡಣ್ಣ :-) ಅದೆಷ್ಟು ಫನ್ನು (ಕಾಡಿಗೆ) .. ಇಷ್ಟ ಆತೋ :-)

    ReplyDelete
  3. Gunda Its very nice one...even some wer am also getting doubt yar....ಯಾವುದೊ ಒಂದು ಬರಹನ ಕಲ್ಪಿಸಿ ಬರಿಬಹುದು..ಎಲ್ಲವನ್ನು ಕಲ್ಪಿಸಿ ಬರಿಯೊದು ಸ್ವಲ್ಪ ಕಷ್ಟನೆ ಅಲ್ವ :):)

    ReplyDelete