Tuesday, November 13, 2012

ಬೈಕು ಮತ್ತು ದೀಪಾವಳಿ

ಪೂಜೆ ಹೇಳೋದೇ ಆತ್ಮಸಾಕ್ಷಿಯ ಆರಾಧನೆಯ ಪ್ರತೀಕ. ನಾವು ಉಪಯೋಗಿಸುವ ಪ್ರತಿಯೊಂದು ವಸ್ತುವಿಗೂ ತಿರುಗಿ  ಗೌರವ ಸೂಚಿಸುವ ಸಂಕೇತ. ಪೂಜೆ ಯಾವತ್ತು ಯಾವ್ದಕ್ಕೆ ಮಾಡಿದರೂ ಒಂದೇ. ಒಳ್ಳೆಯದೇ. ಅದರೂ ಡೆಡ್ಲೈನ್ ಕೊಡದಿದ್ದರೆ ಸಂಬಳ ಕೊಟ್ಟು ಮಾಡಿಸುವ ಕೆಲಸವೇ ಆಗುವುದಿಲ್ಲ. ಇನ್ನು ಪೂಜೆ ಮಾಡು ಅಂದ್ರೆ ಮಾಡಿದ ಹಂಗೇನೆ.

ಅದು  ಹಾಗಿರಲಿ .ನವರಾತ್ರಿಯಂದು   ಆಯುಧ ಪೂಜೆ ಅಂತ ಬೆಂಗಳೂರಿಗರೆಲ್ಲ ಸಾಲು ಸಾಲು ಗಾಡಿಗಳಿಗೆಲ್ಲ  ಬಾಳೆ ತೋಟ ಸಿಕ್ಕಿಸಿಕೊಂಡು ಓಡಾಡುತ್ತಾರೆ. ನಾವು ಸಾಗರಿಗರು ಮಾತ್ರ ಯಾಕೆ  ದೀಪಾವಳಿಯಂದು  ಮಾಡುತ್ತೇವೆ??. ನನ್ನ ಗೆಳೆಯರ ಭಾಷೆಯಲ್ಲಿ ,"ನಿಮ್ದೆನ್ ಸ್ಪೆಷಲ್ಲು "??

actually , ಬೈಕು ಕಾರು , ಗುದ್ದಲಿ ಹೆಡಿಗೆ ಇವೆಲ್ಲ "ಆಯುಧಗಳಲ್ಲ"(Not weapons) . ಅದು "ಆಸ್ತಿ"(Asset). ಲಕ್ಷ್ಮಿ. ಬೆಂಗಳೂರಿಗರು ಅದನ್ನೆಲ್ಲ ಆಯುಧದ ತರಹ ಉಪಯೋಗಿಸಬಹುದು. ನಾವು ಅದನ್ನ ನೀಟಾಗಿ ಉಪಯೋಗಿಸುತ್ತೇವೆ. ಹಾಗಾಗೆ ಆಯುಧಪೂಜೆ ಮಾಡುತ್ತೀರಿ . ನಾವು ಲಕ್ಷ್ಮಿಪೂಜೆ.

ಬೆಂಗಳೂರೇ ಹಾಗೆ . ದಿಕ್ಕು ತಪ್ಪಿ ಬಿಟ್ಟಿದೆ.!!!

3 comments:

  1. Nija...ಬೆಂಗಳೂರಿಗರು ಅದನ್ನೆಲ್ಲ ಆಯುಧದ ತರಹ ಉಪಯೋಗಿಸಬಹುದು...

    ReplyDelete
  2. ಹೌದೋ ಗುಂಡಣ್ಣ..
    ನಮ್ಕಡೆ ಆಯುಧಪೂಜೆ, ಲಕ್ಷ್ಮಿ ಪೂಜೆ , ಅಡಿಕೆ ಮಾರದೇ ಇಟ್ಕಂಡ ಸುಮಾರಷ್ಟು ಜನ್ರ ಮನೇಲಿ ಅಡ್ಕೆ ಪೂಜೆ ಎಲ್ಲಾ ದೀಪಾವಳಿಲೇಯ. ಇದೇ ದೊಡ್ಡಬ್ಬ ನಂಗಕ್ಕೆ :-)

    ReplyDelete