Wednesday, May 2, 2012

ಎದೆಯ ಡೈರಿಯ ...........................೨

ಪೆನ್ನಿನ ಹೊಟ್ಟೆಯೊಳಗಿಂದ ರಕ್ತವನ್ನ ಬಸಿದು ಅಕ್ಷರಕ್ಕೆ ಬಲಿಕೊಡುವಾಗಲೇ ಅವನ ನೆನಪಾಗಬೇಕೆ.ಕಾಮವನ್ನ  ಪ್ರಜ್ಞೆ ಗೆದ್ದ ವಾಸ್ತವದ  ಬಸಿರನ್ನ ಒಪ್ಪಿಕೊಳ್ಳಲಾಗದೆ  ಹೋದನೆ.
"ರಂಗಮ್ಮಾ ., ಒಂದ್ ಟೀ" .
ಕೆಲಸದವರೂ ಎಲ್ ಹಾಳಾಗಿ ಹೋಗಿದಾರೋ.ತಲೆ ಸಿಡಿಯುತ್ತಿದೆ. ಬಾಂಬ್ ನಿರೋಧಕ ತಜ್ಞರನ್ನ ತಲೆ ಒಳಗೆ ಕಳಿಸಬೇಕು.ಜನುಮ ಜನಮಕ್ಕೂ ನೀನೆ ಬೇಕು ಎಂಬ ಆತ್ಮವಂಚನೆಯ ಮಾತನ್ನ ಆಡಲಾರದ್ದೆ  ಹೋಗಿದ್ದೆ ತಪ್ಪಾಗಿ ಹೋಯಿತೇ??.ಪ್ರೀತಿಯ ಪೋಷಾಕಿನಲ್ಲಿ ಅಹಂಕಾರಕ್ಕೊಂದಿಷ್ಟು ಆಹಾರವಾಗುವ, ಪತ್ನಿಶೇಷವೇ ಪ್ರೀತಿಯ ಸಂಕೇತವೆಂದುಕೊಳ್ಳುತ್ತ ಸಾಗುವ ಭಾವಹಾದರಕ್ಕೆ ಒಪ್ಪದ್ದು ನೈತಿಕತೆಯೇ.ಹಾಳು ಯೋಚನೆ.ಸಿಗರೇಟೆ ಉತ್ತಮ.ಬೇಕೆಂದಾಗ ದಕ್ಕುತ್ತದೆ.
ಆತ ಬಿಟ್ಟು ನಡೆದರೂ ಆತನ ನೆನಪುಗಳು ಅಂಟಿಕೊಂಡುಬಿಟ್ಟಿವೆ. ಸೀದು ಹೋದ ಸಿಹಿ ತಿಂಡಿಯ ಪಾತ್ರೆಯ ತಳದಂತೆ.
ಯಾವುದೂ ಅನಿವಾರ್ಯವಲ್ಲದಂತೆ ಬದುಕಿಬಿಡಬೇಕು.ಮನಸ್ಸಿನ ಲಗಾಮು ಹರಿದು ಹಾರುತ್ತಿದ್ದ ಕಾಮಕುದುರೆಗೆ ಜಾಕಿ ಅಷ್ಟೇ ಅವನು.ಇಷ್ಟೇಕೆ ತಲೆಬಿಸಿ ಅವನ ಬಗ್ಗೆ.ಬಟ್ಟೆ ತುಂಡುಗಳ  ಹಿಡಿದು ಹೊಲಿಗೆ ಯಂತ್ರದ ಮೇಲಿಟ್ಟು ತರರರ್ ಎಂದು ಹೊಲಿಗೆ ಹಾಕುವ ಪರಿಯೇ ಈ ಸಂಬಂಧ.ಅವನಿಗಿಷ್ಟವಿಲ್ಲವೆಂದು ಮಿನಿ ಹಾಕದ  ನಾನು , ನನಿಗಿಷ್ಟವಿಲ್ಲವೆಂದು ಮೀಸೆ ಬಿಡದ  ಅವನು. ಹಹ್,ವ್ಯಾಪಾರ.
ಟ್ರಿನ್ ಟ್ರಿನ್
"ಹಲೋ"
" ಹಾಯ್ , ನಾನು ನಿಮ್ಮ ಕೋ ಅರ್ಡಿನೆಟರ್"
"ಹಾ, ಹೇಳಿ"
"ಪ್ರಾಜೆಕ್ಟ್ ಬಗ್ಗೆ ಮಾತನಾಡಬೇಕಿತ್ತು., ನೀವಿವತ್ತು ಬಂದಿಲ್ಲವೆಂದು ಗೊತ್ತಾಯ್ತು"
"ಸರಿ ಮನೆಗೆ ಬನ್ನಿ , ಕಾಫಿ ಕುಡಿಯುತ್ತ ಮಾತನಾಡುವ"
"ಸರಿ, ಬೈ"  
ಬೀರು ಮುಂದೆ ನಿಂತು , ಇವನಿಗೆ ಲೈಟ್ ಬ್ಲೂ ಅಂದ್ರೆ ಇಷ್ಟವಲ್ಲವಾ ಅಂದುಕೊಂಡಳು.

5 comments:

  1. ಮುಂದುವರೆಯಲಿ ಶ್ರೀಪಾದ್ .. ಮಸ್ತ್ ಬರೀತೆ.

    ಒಂಚೂರು ಜಾಸ್ತಿ ಬರೆ.

    ReplyDelete
  2. ಯಾವುದೂ ಅನಿವಾರ್ಯವಲ್ಲ ನಿಜ.... ಆದ್ರೆ ನೆನಪುಗಳು ಅನಿವಾರ್ಯ ಆಗಿದ್ದಕ್ಕೇ ಬೀರು ಮುಂದೆ ಇಷ್ಟದ ತಿಳಿ ನೀಲಿ ಬಣ್ಣದ ಅಂಗಿ ಕಾಣದು....!!
    ಒಳ್ಳೆ ಬರಹ.... :)

    ReplyDelete
  3. ಇದೂ ಇಷ್ಟ ಆತೋ ಗುಂಡಣ್ಣ:-) ಇನ್ನೂ ಏನೋ ಇದ್ದು ಹೇಳ ಹೊತ್ತಿಗೆ ಮುಗ್ಸಿ ಬಿಡ್ತ್ಯಲ್ಲ.. ಇನ್ನೂ ಇದೆ ಹೇಳಾರು ಹಾಕ ಕೊನೆಗೆ :-)

    ReplyDelete
  4. ಪತ್ನಿಶೇಷ, ಕುದುರೆಗೆ.. ಅಬ್ಬಾ ಎಂಥಾ ಕಾನ್ಸೆಪ್ಟುಗಳು :-)

    ReplyDelete