Monday, April 9, 2012

ನನ್ನೊಡತಿ ನೀನು

ಮೃಗವಾಗಿ ಖಗವಾಗಿ , ಬಂದು ಎರಗುವ ಸುನಾಮಿಯಾಗಿ ,
ಭೋರ್ಗರೆಯುವ ಕಡಲಾಗಿ ನಿನ್ನೊಡನೆ ಕಾದಾಡಿದರೂ
ಎನ್ನ ಧರಿಸುವ ಅವನಿ ನೀನು.

ಎನ್ನೊಡಲ ಸ್ಖಲಿತ ಭಾವಗಳ ,ಫಲಿತ ಹಣ್ಣುಗಳ
ರುಚಿ ನೋಡುವ ಹೆಣ್ಣು ನೀನು :)

ಬರಡಾಗಿ , ಮಳೆಯಾಗಿ ನಾ ಭಾವದತಿವೃಷ್ಟಿ.
ಉಬ್ಬರಿಸಿ ಅಬ್ಬರಿಸಿ ನಿನ್ನದೆಯ ಗುದ್ದಿದರು
ಎನ್ನ ಧರಿಸುವ ಸಾಗರಿಕೆ ನೀನು

ನನ್ನದಿಯ ನಡುಮನೆಯ ತಡಿಮಡಕೆಯೊಡೆದು
ಕದ್ದು ಹೀರುವ ಅಳಿನಿ ನೀನು :)

ನನ್ನೊಡತಿ ನೀನು :)

13 comments:

  1. ಅಳಿನಿ ಹೇಳುವ ಪ್ರಯೋಗ ಯಕ್ಷಗಾನಲ್ಲಿ ಕೇಳಿದ್ದು ಬಿಟ್ಟರೆ ಉಪಯೋಗ್ಸಿದವು ಕಡ್ಮೆ.. ಒಳ್ಳೆಯ ಹನಿ ! ಶಹಬ್ಬಾಸ್ ಗುಂಡೂ :)

    ReplyDelete
  2. Ulti ಗುಂಡ....! ಎಂತ ಸೂಪರ್ ಶಬ್ದಗಳು, ಸೂಪರ್ ಜೋಡಣೆ.. ಸೂಪರ್ ಭಾವನೆ.... :) ನಿನ್ನೊಡತಿ ಹುಡ್ಕ್ಯ ಬರ್ಲಿ ಬೇಗ... ;) ತ್ರಿಪದಿ, ದ್ವಿಪದಿ ಸೇರ್ಸಿ ಚೊಲೋ ಬರದ್ದೆ... ಶಹಬ್ಬಾಸ್... :)

    ReplyDelete
    Replies
    1. ನಂಗಳದ್ದು ಬಹಳ ಘಟ್ಟಿ ಸಂಬಂಧ.ಹಾಗಾಗೆ ನೋಡು ಹುಡುಗಿ ಕಾಯ್ತಾ ಇದ್ದ ನಂಗೆ, ಭವಿಷ್ಯದಲ್ಲೆಲ್ಲೋ ಕುಳಿತು ;)

      Delete
  3. ಮಾರನ೦ ಗಾಳಿಯು೦ ಧೂಳಿಯು೦ ರಜನಿಯು೦ ನೀರಾಟಮ೦ ಬೇಟಮ೦ |
    ಸುರೆಯು೦ ರಮೆಯು೦ ಲಲನೆಯು೦ ಕೊ೦ಡಾಡಿ ಬೆ೦ಡಾಗಬೇಡಯ್ಯ ಗು೦ಡ ||

    ReplyDelete
    Replies
    1. ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ|
      ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ||
      ಗುಡಿಯೊಳಗೆ ಕೊಡುವ ಹೂ ದೈವಭಕ್ತಂಗೆ ಚೆಂದ|
      ಬಿಡಿಗಾಸು ಹೂವಳಗೆ- ಮಂಕುತಿಮ್ಮ||

      Delete
  4. ನೈಸ್ ಶ್ರೀಪಾದು ... ಶೃಂಗಾರ ಕಾವ್ಯ ವನ್ನ ಬರೆಯಲೂ ಸ್ವಲ್ಪ ಕಷ್ಟ ಪಡವು ... ಅದನ್ನ ಮನಸ್ಸಿನಲ್ಲಿಯೇ ಅನುಭವಿಸಿ ಬರೆಯವು ...ತುಂಬಾ ಚೆನ್ನಾಗಿದ್ದು

    ReplyDelete
    Replies
    1. ಕಲ್ಪಿಸಿ ಬರೆದದ್ದೋ ಮಾರಾಯ.ಅನನುಭವಿ ಇನ್ನುವ ;)

      Delete
  5. ಚೆಂದಿದ್ದೋ ಗುಂಡಣ್ಣ :-) ಅಳಿನಿ ಅಂದ್ರೆ ಎಂಥೋ ?

    ReplyDelete
  6. ಅಳಿನಿ ಅಂದ್ರೆ ಹೆಣ್ಣು ದುಂಬಿ ಪ್ರಶಸ್ತಿ.ಧವಾ :)

    ReplyDelete