ಮೃಗವಾಗಿ ಖಗವಾಗಿ , ಬಂದು ಎರಗುವ ಸುನಾಮಿಯಾಗಿ ,
ಭೋರ್ಗರೆಯುವ ಕಡಲಾಗಿ ನಿನ್ನೊಡನೆ ಕಾದಾಡಿದರೂ
ಎನ್ನ ಧರಿಸುವ ಅವನಿ ನೀನು.
ಎನ್ನೊಡಲ ಸ್ಖಲಿತ ಭಾವಗಳ ,ಫಲಿತ ಹಣ್ಣುಗಳ
ರುಚಿ ನೋಡುವ ಹೆಣ್ಣು ನೀನು :)
ಬರಡಾಗಿ , ಮಳೆಯಾಗಿ ನಾ ಭಾವದತಿವೃಷ್ಟಿ.
ಉಬ್ಬರಿಸಿ ಅಬ್ಬರಿಸಿ ನಿನ್ನದೆಯ ಗುದ್ದಿದರು
ಎನ್ನ ಧರಿಸುವ ಸಾಗರಿಕೆ ನೀನು
ನನ್ನದಿಯ ನಡುಮನೆಯ ತಡಿಮಡಕೆಯೊಡೆದು
ಕದ್ದು ಹೀರುವ ಅಳಿನಿ ನೀನು :)
ನನ್ನೊಡತಿ ನೀನು :)
ಭೋರ್ಗರೆಯುವ ಕಡಲಾಗಿ ನಿನ್ನೊಡನೆ ಕಾದಾಡಿದರೂ
ಎನ್ನ ಧರಿಸುವ ಅವನಿ ನೀನು.
ಎನ್ನೊಡಲ ಸ್ಖಲಿತ ಭಾವಗಳ ,ಫಲಿತ ಹಣ್ಣುಗಳ
ರುಚಿ ನೋಡುವ ಹೆಣ್ಣು ನೀನು :)
ಬರಡಾಗಿ , ಮಳೆಯಾಗಿ ನಾ ಭಾವದತಿವೃಷ್ಟಿ.
ಉಬ್ಬರಿಸಿ ಅಬ್ಬರಿಸಿ ನಿನ್ನದೆಯ ಗುದ್ದಿದರು
ಎನ್ನ ಧರಿಸುವ ಸಾಗರಿಕೆ ನೀನು
ನನ್ನದಿಯ ನಡುಮನೆಯ ತಡಿಮಡಕೆಯೊಡೆದು
ಕದ್ದು ಹೀರುವ ಅಳಿನಿ ನೀನು :)
ನನ್ನೊಡತಿ ನೀನು :)
ಅಳಿನಿ ಹೇಳುವ ಪ್ರಯೋಗ ಯಕ್ಷಗಾನಲ್ಲಿ ಕೇಳಿದ್ದು ಬಿಟ್ಟರೆ ಉಪಯೋಗ್ಸಿದವು ಕಡ್ಮೆ.. ಒಳ್ಳೆಯ ಹನಿ ! ಶಹಬ್ಬಾಸ್ ಗುಂಡೂ :)
ReplyDeleteಧನ್ಯ :). ಧವಾ
DeleteUlti ಗುಂಡ....! ಎಂತ ಸೂಪರ್ ಶಬ್ದಗಳು, ಸೂಪರ್ ಜೋಡಣೆ.. ಸೂಪರ್ ಭಾವನೆ.... :) ನಿನ್ನೊಡತಿ ಹುಡ್ಕ್ಯ ಬರ್ಲಿ ಬೇಗ... ;) ತ್ರಿಪದಿ, ದ್ವಿಪದಿ ಸೇರ್ಸಿ ಚೊಲೋ ಬರದ್ದೆ... ಶಹಬ್ಬಾಸ್... :)
ReplyDeleteನಂಗಳದ್ದು ಬಹಳ ಘಟ್ಟಿ ಸಂಬಂಧ.ಹಾಗಾಗೆ ನೋಡು ಹುಡುಗಿ ಕಾಯ್ತಾ ಇದ್ದ ನಂಗೆ, ಭವಿಷ್ಯದಲ್ಲೆಲ್ಲೋ ಕುಳಿತು ;)
Deleteಮಾರನ೦ ಗಾಳಿಯು೦ ಧೂಳಿಯು೦ ರಜನಿಯು೦ ನೀರಾಟಮ೦ ಬೇಟಮ೦ |
ReplyDeleteಸುರೆಯು೦ ರಮೆಯು೦ ಲಲನೆಯು೦ ಕೊ೦ಡಾಡಿ ಬೆ೦ಡಾಗಬೇಡಯ್ಯ ಗು೦ಡ ||
ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ|
Deleteಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ||
ಗುಡಿಯೊಳಗೆ ಕೊಡುವ ಹೂ ದೈವಭಕ್ತಂಗೆ ಚೆಂದ|
ಬಿಡಿಗಾಸು ಹೂವಳಗೆ- ಮಂಕುತಿಮ್ಮ||
ನೈಸ್ ಶ್ರೀಪಾದು ... ಶೃಂಗಾರ ಕಾವ್ಯ ವನ್ನ ಬರೆಯಲೂ ಸ್ವಲ್ಪ ಕಷ್ಟ ಪಡವು ... ಅದನ್ನ ಮನಸ್ಸಿನಲ್ಲಿಯೇ ಅನುಭವಿಸಿ ಬರೆಯವು ...ತುಂಬಾ ಚೆನ್ನಾಗಿದ್ದು
ReplyDeleteಕಲ್ಪಿಸಿ ಬರೆದದ್ದೋ ಮಾರಾಯ.ಅನನುಭವಿ ಇನ್ನುವ ;)
Deleteಚೆಂದಿದ್ದೋ ಗುಂಡಣ್ಣ :-) ಅಳಿನಿ ಅಂದ್ರೆ ಎಂಥೋ ?
ReplyDeleteಅಳಿನಿ ಅಂದ್ರೆ ಹೆಣ್ಣು ದುಂಬಿ ಪ್ರಶಸ್ತಿ.ಧವಾ :)
ReplyDeleteVery gud... Nice one...!
ReplyDeletethank you :)
Deletegood one! :)
ReplyDelete