ಪಾತ್ರವೆನೆಗೆ ಇಷ್ಟವೆಂದೆ
ಮುದ್ದು ಕೃಷ್ಣ ಬೆಣ್ಣೆ ಕಳ್ಳ
ಅವಳಿಗ್ಯಾಕೆ ಬೇಕಂತೆ
ಬೆಣ್ಣೆಯ ಪಾತ್ರ-ಅರ್ಥವೇ ಆಗಲಿಲ್ಲ
------------------------------
ನೂಪುರದೊಡನೆ ಆಡಬಲ್ಲೆ ನಾ ರಾತ್ರಿ ಇಡೀ.,
ನಾಚುತವಳು ಅಂದಳು ,ನಡುವಿಗುಡಲಾರೆ ಗೆಜ್ಜೆಯ -ಬಿಡಿ
-ಮತ್ತೆ ಅರ್ಥವಾಗಲಿಲ್ಲ
------------------------------
ಮಧುತುಪ್ಪ ಇಷ್ಟವೆಂದೆ
ಮಧುವಂತಿ ತುಟಿ ವರೆಸಿಕೊಂಡಳು
-ಅರ್ಥವಾಗುತ್ತಿಲ್ಲ
------------------------------
ಅಬ್ಬಿಗುಳಿಗೆ ಕಿಚ್ಚನಿಟ್ಟು
ಹಬೆಗುಡುವ ನೀರನಿಡಿದು
ಚಳಿ ಎಂದು ಕೂಗುತಾಳೆ ...
-ಬಹುಶಃ ಹುಷಾರಿಲ್ಲ
------------------------------
ಊಟಿ ಸೇಬು ಊಟಿಯಲ್ಲಷ್ಟೇ ಏನೋ ಜಾಣೇ.,
ಅಂದಿದ್ದಕ್ಕವಳ ಕೆನ್ನೆ ಕೆಂಪಾಗಿದ್ದೇಕೆ ನಾ ಕಾಣೆ..
-ತಿಂದದ್ದು ನೆನಪಾಗಿರಬೇಕು
ಮುದ್ದು ಕೃಷ್ಣ ಬೆಣ್ಣೆ ಕಳ್ಳ
ಅವಳಿಗ್ಯಾಕೆ ಬೇಕಂತೆ
ಬೆಣ್ಣೆಯ ಪಾತ್ರ-ಅರ್ಥವೇ ಆಗಲಿಲ್ಲ
------------------------------
ನೂಪುರದೊಡನೆ ಆಡಬಲ್ಲೆ ನಾ ರಾತ್ರಿ ಇಡೀ.,
ನಾಚುತವಳು ಅಂದಳು ,ನಡುವಿಗುಡಲಾರೆ ಗೆಜ್ಜೆಯ -ಬಿಡಿ
-ಮತ್ತೆ ಅರ್ಥವಾಗಲಿಲ್ಲ
------------------------------
ಮಧುತುಪ್ಪ ಇಷ್ಟವೆಂದೆ
ಮಧುವಂತಿ ತುಟಿ ವರೆಸಿಕೊಂಡಳು
-ಅರ್ಥವಾಗುತ್ತಿಲ್ಲ
------------------------------
ಅಬ್ಬಿಗುಳಿಗೆ ಕಿಚ್ಚನಿಟ್ಟು
ಹಬೆಗುಡುವ ನೀರನಿಡಿದು
ಚಳಿ ಎಂದು ಕೂಗುತಾಳೆ ...
-ಬಹುಶಃ ಹುಷಾರಿಲ್ಲ
------------------------------
ಊಟಿ ಸೇಬು ಊಟಿಯಲ್ಲಷ್ಟೇ ಏನೋ ಜಾಣೇ.,
ಅಂದಿದ್ದಕ್ಕವಳ ಕೆನ್ನೆ ಕೆಂಪಾಗಿದ್ದೇಕೆ ನಾ ಕಾಣೆ..
-ತಿಂದದ್ದು ನೆನಪಾಗಿರಬೇಕು
ಗುಂಡ ಲಾಸ್ಟ್ ೩ ಸಲ್ಲು ಸೂಪರ್.... :) ಮೊದಲಿನದು ಎರಡು ನಂಗು ಅರ್ಥ ಆಗಲ್ಲೆ ಅಂತಿಟ್ಗ... :D
ReplyDeleteಮಧುತುಪ್ಪ, ಊಟಿ ಸೇಬು.... ಸೂಪರ್.... :) :P
ಥ್ಯಾಂಕ್ಯು :)...ಹಿಂಗೆ ಕನಸಿನ ಕನ್ಯೆಯ ನೆನಪಿನಲ್ಲಿ ;)
ReplyDeleteಕನಸಿನ ಕನ್ಯೆಯ ನೆನಪಲ್ಲಿ ಬಿಡಿಸಿದ ಕಾವ್ಯ ಚಿತ್ತಾರ...ಸೂಪರ್...
ReplyDeleteಧನ್ಯವಾದ ಮೌನರಾಗ
ReplyDeleteಬಹುಶಃ ಇವಾಗ Shakespeare Wordworth ಬದುಕ್ಕಿದ್ರೆ ನಿನ್ನ ಕವಿತೆಗಳನ್ನ ನೋಡಿ...ಹೊಟ್ಟೆ ಕಿಚ್ಚು ಪಡ್ಕೊತ್ತಿದ್ರೆನು......
ReplyDeleteಬಹುಶಃ ಇವಾಗ Shakespeare Wordsworth ಬದುಕ್ಕಿದ್ರೆ ನಿನ್ನ ಕವಿತೆಗಳನ್ನ ನೋಡಿ...ಹೊಟ್ಟೆ ಕಿಚ್ಚು ಪಡ್ಕೊತ್ತಿದ್ರೆನು......
ReplyDelete