Tuesday, December 13, 2011

ಸರಸೀ ....

ಪಾತ್ರವೆನೆಗೆ ಇಷ್ಟವೆಂದೆ
ಮುದ್ದು ಕೃಷ್ಣ ಬೆಣ್ಣೆ ಕಳ್ಳ
ಅವಳಿಗ್ಯಾಕೆ ಬೇಕಂತೆ
ಬೆಣ್ಣೆಯ ಪಾತ್ರ-ಅರ್ಥವೇ ಆಗಲಿಲ್ಲ

------------------------------
ನೂಪುರದೊಡನೆ ಆಡಬಲ್ಲೆ ನಾ ರಾತ್ರಿ ಇಡೀ.,
ನಾಚುತವಳು ಅಂದಳು ,ನಡುವಿಗುಡಲಾರೆ ಗೆಜ್ಜೆಯ -ಬಿಡಿ
-ಮತ್ತೆ ಅರ್ಥವಾಗಲಿಲ್ಲ
------------------------------

ಮಧುತುಪ್ಪ ಇಷ್ಟವೆಂದೆ
ಮಧುವಂತಿ ತುಟಿ ವರೆಸಿಕೊಂಡಳು
-ಅರ್ಥವಾಗುತ್ತಿಲ್ಲ

------------------------------
ಅಬ್ಬಿಗುಳಿಗೆ ಕಿಚ್ಚನಿಟ್ಟು
ಹಬೆಗುಡುವ ನೀರನಿಡಿದು
ಚಳಿ ಎಂದು ಕೂಗುತಾಳೆ ...
-ಬಹುಶಃ ಹುಷಾರಿಲ್ಲ

------------------------------
ಊಟಿ ಸೇಬು ಊಟಿಯಲ್ಲಷ್ಟೇ ಏನೋ ಜಾಣೇ.,
ಅಂದಿದ್ದಕ್ಕವಳ ಕೆನ್ನೆ ಕೆಂಪಾಗಿದ್ದೇಕೆ ನಾ ಕಾಣೆ..

-ತಿಂದದ್ದು ನೆನಪಾಗಿರಬೇಕು
 

6 comments:

  1. ಗುಂಡ ಲಾಸ್ಟ್ ೩ ಸಲ್ಲು ಸೂಪರ್.... :) ಮೊದಲಿನದು ಎರಡು ನಂಗು ಅರ್ಥ ಆಗಲ್ಲೆ ಅಂತಿಟ್ಗ... :D
    ಮಧುತುಪ್ಪ, ಊಟಿ ಸೇಬು.... ಸೂಪರ್.... :) :P

    ReplyDelete
  2. ಥ್ಯಾಂಕ್ಯು :)...ಹಿಂಗೆ ಕನಸಿನ ಕನ್ಯೆಯ ನೆನಪಿನಲ್ಲಿ ;)

    ReplyDelete
  3. ಕನಸಿನ ಕನ್ಯೆಯ ನೆನಪಲ್ಲಿ ಬಿಡಿಸಿದ ಕಾವ್ಯ ಚಿತ್ತಾರ...ಸೂಪರ್...

    ReplyDelete
  4. ಬಹುಶಃ ಇವಾಗ Shakespeare Wordworth ಬದುಕ್ಕಿದ್ರೆ ನಿನ್ನ ಕವಿತೆಗಳನ್ನ ನೋಡಿ...ಹೊಟ್ಟೆ ಕಿಚ್ಚು ಪಡ್ಕೊತ್ತಿದ್ರೆನು......

    ReplyDelete
  5. ಬಹುಶಃ ಇವಾಗ Shakespeare Wordsworth ಬದುಕ್ಕಿದ್ರೆ ನಿನ್ನ ಕವಿತೆಗಳನ್ನ ನೋಡಿ...ಹೊಟ್ಟೆ ಕಿಚ್ಚು ಪಡ್ಕೊತ್ತಿದ್ರೆನು......

    ReplyDelete