Tuesday, June 28, 2011

ತಲೆಮಾರು -೧



ರಾಮ ಕುರ್ಚಿಯಲ್ಲಿ ಕುಳಿತಿದ್ದ ರಾಜೇಂದ್ರ ಶರ್ಮ ಮಗನನ್ನು ತರಾಮಾರಿ ಬೈಯ್ಯುತ್ತಿದ್ದರು.
"ನಿನ್ ವಯ್ಯಸ್ಸಿಗೆ ನನಗೆ ಗಂಜಿ ಗಂಜಿಗೆ ಗತಿ ಇರಲೇ ಗೊತ್ತಾ??., ಹಸಿದ ಹೊಟ್ಟೆಯಲ್ಲಿ  ಕವಚಿ ಮಲಗುತ್ತಿದ್ದೆ ರಾತ್ರಿ.,ವಾರಾನ್ನ ಮಾಡಿ ಈ ., ಇವತ್ತಿನ ಹಂತಕ್ಕೆ ಬಂದಿದ್ದೇನೆ ,ನಿನಗೇನು ಕಡಿಮೆ ಹಾಂ".,,"ನಾನು ಗಂಜಿ ಕುಡಿಯುತ್ತಿದ್ದ ಕಾಲಕ್ಕೆ ನೀನು ಎಣ್ಣೆ ಹೊಡ್ಯುತ್ತಿಯಾ ನಾಚಿಕೆ ಆಗಬೇಕು ನಿನ್ನ ಜನ್ಮಕ್ಕೆ. ಛೀ"

ಶಶಾಂಕ ಶರ್ಮ ಮೆದುಳು ತಕ್ಷಣಕ್ಕೆ ಕೆಲಸ ಮಾಡುವುದನ್ನೇ ನಿಲ್ಲಿಸಿದಂತಿತ್ತು.ಈ ಪರಿ ಅಪ್ಪನ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇನೆ ಅಂತ ಅಂದಾಜು ಇರಲಿಲ್ಲ ಮಾರಾಯನಿಗೆ.ಉತ್ತರವಾದರೂ ಏನು ಕೊಟ್ಟಾನು??.
ಇನ್ನೊಮ್ಮೆ ಕುಡಿದದ್ದು ಕಂಡರೆ ಕಾಲು ಮುರಿದು ಬಿಡುತ್ತೇನೆ ಎಂಬ ಎಚ್ಚೆರಿಕೆಯ ಮಾತಿನೊಂದಿಗೆ ಅವತ್ತಿನ ಪ್ರಹಸನ ಮುಗಿದಿತ್ತು.

-------------------------------------------------------------------------------------------------------------
ಮಲಗಿದ ರಾಜೇಂದ್ರ ಶರ್ಮನಿಗೆ ಬಾಲ್ಯದ ನೆನಪುಗಳು ತಲೆ ತುಂಬಿಕೊಂಡವು.
ಅಮ್ಮಾ ...ಎಂದಳುತ್ತಾ  ತರಚಿದ ಕಾಲಿನೊಂದಿಗೆ ಬಂದಾಗ ಆ ಕಾಂಗ್ರೆಸ್ಸ್ ಸೊಪ್ಪಿನ ರಸ ಹಚ್ಚಿ ರಕ್ತ ಕಟ್ಟಿಸಿದ ಆಯಿ.ರಾತ್ರಿಯ ಅನ್ನವೇ ., ಬೆಳಗಿನ ಹುರಿದನ್ನದ ಮುಖವಾಡ ಹೊತ್ತು ., ಹೊಟ್ಟೆಯ ಪಾಡಿಸಿದ ನೆನಪುಗಳು ಹಾಯತೊಡಗಿದವು  

ರಾಜೇಂದ್ರ ಹುಟ್ಟಿದ ಊರು ಲಿಂಗನಮಕ್ಕಿ ಜಲಾಶಯದ ನೀರ ಹೊಟ್ಟೆಯೊಳಗೆ ಮಲಗಿತ್ತು.ಕೊಪ್ಪಲಮನೆ ಎಂಬ,ಅಕ್ಷರಶಃ ಮೂರು ಮತ್ತೊಂದು ಮನೆ ಇದ್ದ ಊರದು.ಅಪ್ಪ ಅಮ್ಮ ಅಜ್ಜ ಅಜ್ಜಿ ಮತ್ತು ೭ ಜನ ಸಹೋದರ -ಸಹೋದರಿಯರಲ್ಲಿ ನಾಲ್ಕನೆಯ ಮಗ ರಾಜೇಂದ್ರ ಶರ್ಮ.ಬಹುಶಃ ಹುಟ್ಟಿದಾಗ ,ಆ ಹುಟ್ಟಿಗೊಂದು ಕಾರಣ ಇರಲೇ ಬೇಕೆಂಬ, ಸಾಧನೆಯ ಸಾಧನ ಆಗಲೇ ಬೇಕೆಂಬ ಮಹತ್ವಾಕಾಂಕ್ಷೆ ಯಾರಲ್ಲೂ ಇದ್ದಿದ್ದು ಸುಳ್ಳು.ಮನೆಯ ಎದಿರಿಗಿನ ಸೊಂಪಾದ ತೋಟ. ಅದರಾಚೆಗೆ ಹೊಳೆವ ಹೊಳೆ.ವೈಷ್ಣ ಹೊಳೆ ಅಂತ ಕರೆಯುತ್ತಿದ್ದರದಕ್ಕೆ.ಅದೇ ಹೆಸರೋ ಅಥವಾ ಯಾವದಾದರೂ ಹೆಸರಿನ ಅಪಭ್ರಮ್ಷವೋ ಕೆದಕಿದವರಿಲ್ಲ.ಅಲ್ಲೇ ರಾಜೇಂದ್ರ ಈಜು ಕಲಿತದ್ದು.ದೊಡ್ಡಣ್ಣ ಹಿಯಾಳಿಸುತ್ತಲೇ.,ಕಲಿಸಿಕೊಟ್ಟಿದ್ದ.ಅಷ್ಟಕ್ಕೂ ಈಜು ಒಂದು ಮೂಲಭೂತ ಅಗತ್ಯವೇ ಆಗಿತ್ತು.೬ ಮೈಲು ದೂರದ ಶಾಲೆಗೆ ಇದೆ ಹೊಳೆಯನ್ನ ತೆಪ್ಪದ ಮೇಲೆ ದಾಟಬೇಕಿತ್ತು.

ಹೊಳೆ ನೀರು., ಹಾವು ಹಸೆ ,ಸಂಕ .,,ಎಲ್ಲವನ್ನೂ ಬದುಕಿನ ಒಂದು ಭಾಗವಾಗೆ ನೋಡುತ್ತಾ ತೆಗೆದುಕೊಳ್ಳುತ್ತಾ ಬೆಳೆದ ಜನಗಳ ಮದ್ಯ ರಾಜೇಂದ್ರನೂ ಒಬ್ಬನಾಗಿದ್ದ.ಅವನ ಜೀವನದ ಬಹಳ ದೊಡ್ಡ ತಿರುವು ., ಶರಾವತಿ ನದಿ ನೀರಿನ ತಿರುವಿಗೆ ಆಣೆಕಟ್ಟು ಕಟ್ಟಲು ಸರ್ಕಾರ ನಿರ್ಧರಿಸಿದ್ದು.ನಮ್ಮದು ಮುಳುಗಡೆ ಪ್ರದೇಶವಂತೆ ಅಂತ ಕೇಳಿದಾಗಲೇ ., ಆ ಭಾಗದ ಜನರ ಎದೆ ಬಡಿತ ದಸಕ್ಕೆನ್ದಿತ್ತು.ದೊಡ್ಡವರ ಭಾವನೆಗಳ ತುಮುಲ ಅರ್ಥವಾಗುವ ವಯಸ್ಸಲ್ಲ ಅವನದು.ಮನೆಯ ಅಪ್ಪ -ಅಜ್ಜಂದಿರು ಗುಳೆ ಏಳುವ ವ್ಯವಸ್ಥೆಯಲ್ಲಿ ತೊಡಗಿದ್ದರೆ., ರಾಜೇಂದ್ರ ಅಣ್ಣ ತಮ್ಮಂದಿರ ಜೊತೆ  "ಹೇ ಇವತ್ತು ಹೊಳೆ ಇಷ್ಟು ಮೇಲೆ ಬಂದಿದೆ" ಅಂತ ಲೆಕ್ಕ ಹಾಕುತ್ತಿದ್ದ.

ಆಮೇಲೆ ಬೆಂಗಳೂರಿಗೆ ಬಂದಿದ್ದು.ಮೈಯ ಬೆವರ ಪ್ರತಿಹನಿಯು ಇಂದು ಸಾಮ್ರಾಜ್ಯವಾಗಿ ನಿಂತಿದೆ.ಕೆಲವೊಂದು ದಿವಸ ಕಾಲಿ ಅರ್ಧ ಕಪ್ಪು ಚಾದಲ್ಲೇ ದಿನದ ಜೀವನ ಮುಗಿಸಿ ಬಂದದ್ದುಂಟು.ಯಾಕೆ ಮಗ ಹೀಗಾಗುತ್ತಿದ್ದಾನೆ ಹೇಳುವುದೇ ಅರ್ಥವಾಗದ ವಿಷಯವಾಗಿಬಿಟ್ಟಿದೆ.ಚನ್ನಾಗಿ ಓದಲಿ .ತನ್ನಂತೆ ಕಷ್ಟ ಪಡದೆ ಇರಲಿ ಎಂದು ಅಂತಾರಾಷ್ಟ್ರೀಯ ಮಟ್ಟದ ಶಾಲೆಗೇ ಸೇರಿಸಿದ್ದೇನೆ.ಜನಮಾನಸದ ಮದ್ಯೆ ಕೀಳು ಆಗದಿರಲಿ ಹೇಳುವ ಕಾರಣಕ್ಕೆ ಲಕ್ಷ ಕೊಟ್ಟು ಎಂಜಿನೀರ್ ಓದಿಸುತ್ತಿದ್ದೇನೆ.ಅದರೂ ..ಯಾಕೊ ತಾನು ಹೇಳಿದ ಮಾತು ಕೇಳುತ್ತಿಲ್ಲ ಶಶಾಂಕ ಹೇಳುವುದು.ನಿಧಾನಕ್ಕೆ ಅರ್ಥವಾಗುತ್ತಿದೆ.

ಯಾಮಿನಿ ಆತನ ರಾತ್ರಿಯ ತಬ್ಬಿಕೊಂಡಿತು.
                                                                                                                             (contd....)

5 comments:

  1. Superb Yar...please continue..

    Regards

    Rashmigowda

    ReplyDelete
  2. Dear Brother ಶ್ರೀಪಾದು,
    ನಿನ್ನ blog ಓದಿ ಖುಷಿಯಾಯ್ತು. ದೇವರು ಮತ್ತು ತಲೆಮಾರು ಕಥೆಗಳು ಚೆನ್ನಾಗಿದ್ದವು. ನಾನು usual ಆಗಿ ಕತೆ ಅಥವಾ ಭಾವನಾತ್ಮಕ ಆರ್ಟಿಕಲ್ ಗಳನ್ನ ಓದೋದು ಕಡಿಮೆ. ಅದನ್ನ ನಾನು ರವಿ ಬೆಳಗೆರೆ ಸ್ಟೈಲ್ ಅನ್ನುತ್ತೇನೆ. ಅವು ನನ್ನ ತಲೆಯಲ್ಲಿ ಹೋಗುವುದೂ ಇಲ್ಲ, ನ೦ಗೆ ಅ೦ಥವುಗಳನ್ನ ಬರೆದೂ ಕೂಡ ರೂಢಿಯಿಲ್ಲ. ನಾನೇನಿದ್ರೂ ಪಟ್ಟಾಗಿ ಕೂತು ಗ೦ಭೀರವಾಗಿ ಓದಿ ಗ೦ಭೀರವಾಗಿ ಬರೆಯೋನು. ಭಾವನೆಗಳನ್ನ ಬರವಣಿಗೆಗೆ ಇಳಿಸುವುದು ಅಷ್ಟು ಸುಲಭ ಅಲ್ಲ. ಅದು ಕೆಲವರಿಗೆ ಹೇಗೆ ಸಿದ್ಧಿಸುತ್ತದೆ ಎನ್ನುವುದು ಆಶ್ಚರ್ಯ. ಅದ್ರಲ್ಲೂ ನಿನ್ನ ಬರವಣಿಗೆಯಲ್ಲಿ ತು೦ಬ uniqueness ಇದೆ. ಸಾಧಾರಣವಾಗಿ ಜನ ಇಷ್ಟಪಡುವ Topicless Humour, Sentiment ಮತ್ತು Romantic ನ ಆಚೆ ಈ ಲೇಖನಗಳಲ್ಲಿ ತೀರ ಆಳದೆಲ್ಲೆಲ್ಲೊ ಮನಸ್ಸಿಗೆ ತಾಗುವ ವಿಷಯಗಳಿವೆ. ಹೆಚ್ಚಿನದ್ದರಲ್ಲಿ ಹವಿಗನ್ನಡದ ಸೊಗಡಿದ್ದದ್ದು ರಾಶಿ ಇಷ್ಟ ಆಯ್ತು. ನ೦ಗೆ ಇದೇ ಥರದ ಲೇಖನಗಳನ್ನು ಬರೆಯೋಕೆ ಇವು ಸ್ಫೂರ್ತಿಯಾಗಬಹುದು.

    ReplyDelete
  3. ಮುಂದುವರೆಸಬೇಕಾಗಿದೆ...ಚೆನ್ನಾಗಿದೆ.

    ReplyDelete
  4. Good gunda... :) cholo barita idde... continue maadu.. sentence formation kade gamana kodu.. :)

    ReplyDelete