Sunday, February 21, 2021

ಪಯಣ

ಹೆಸರೇ ಇಲ್ಲದ ಊರಿಗೆ ಒಂಟಿ ಕಂಬಿಯ ರೈಲು 

ಬೋಗಿಯ ಒಳಗೆ ಬಿಕರಿಗೆ ಉಂಟೇ ಕೈಗೆ ಸಿಕ್ಕದ 

ಬೆಂಕಿಯ ಹೂವು ?


ಮುಚ್ಚದ ಕಿಟಕಿಯ ಕಣ್ಣೊಳಗೆ ಉದ್ದಾನುದ್ದ ಬಯಲು 

ಹಾರುವ ಈಪ್ಸೆಗೆ ಕಾಲು ಕಟ್ಟಿದೆಯೇ ಎರಡು ಮಂಡೆಯಾ 

ಕೆಂಪನೆ ಹಾವು ?


ನಿಲ್ಲದ ಗಾಡಿಗೆ ಹತ್ತುವರ್ಯಾರೋ , ಇಳಿಯುವರ್ಯಾರೋ 

ಕೊಲ್ಲುವರ್ಯಾರೋ , ಕೂರುವರ್ಯಾರೋ ಗೊತ್ತೇ ಇಲ್ಲ

ಕತ್ತಲ ರಾತ್ರಿ ಮಗ್ಗುಲು ಬದಲಿಸೆ ಚುಚ್ಚಿದ್ಯಾವದು 

ಹೂವ ! ಮುಳ್ಳ  ?

 

ಕೋರಿ ಸೆಟ್ಟಿಯಾ ಬುಟ್ಟಿಯ ಒಳಗೆ ಕಟ್ಟುಗಟ್ಟಲೆ ಹಳವಂಡ 

ಕೊಟ್ಟು ಕಸಿಯುವ ಯಾಪಾರಕ್ಕೆ ಎಲ್ಲಾ ತುಟ್ಟಿ ,ನೆಂಟೇ  ಅಗ್ಗ 

ಎನ್ನೆಯ ತಾವು ಮೀಸಲಿಗುಂಟು  ಮುಂದಿನ ತಾಣದಿಯಾದರೂ 

ಹತ್ತುವೆಯೇನೋ ನನ್ನಯನಲ್ಲ ?




2 comments:

  1. 👌👌👌👏👏super yajmanre

    ReplyDelete
  2. ಚಂದದ ಸಾಲುಗಳು.. ಬೋಗಿ ಹತ್ತಲಾಗದ ಹತಾಶ ಬಾವ!

    ಪಯಣಿಸಲಾಗದೆ ಕುಳಿತಲ್ಲೆ ಕುಳಿತು ಕುಳಿತು ನೆಂಟರಿಷ್ಟರೆಲ್ಲರ ನೆನಪು ಕಾಡುತ್ತಿದೆ. ತಿರುಗೋ ಕುದುರೆಯ ಮಾಯಾ ಹಗ್ಗದಿ ಕಟ್ಟಿಹಾಕಿದಂಗೆ ಆಗಿದೆ!

    ReplyDelete