Tuesday, October 22, 2013

ಬೆಳಕು ಬದಲಿಸದು ಬಣ್ಣ .....

ಇರುಳು ಕಾನನದೊಳಗೆ ಪ್ರೀತಿ ತಿಮಿರದ ಕೂಪ 
ಉಸುಕು ಮುಸುಕಿನ ಒಳಗೆ ಹೊಗೆಯುತಿದೆ ಕನಸ ಧೂಪ 
ಕಣ್ಣ ಕಪ್ಪಿನದೋ ಬೆಳ್ಳಂ ಬೆಳಕಿನದೋ ಕಾಯುತಿಹ ಭಾವಿ 
ಬಣ್ಣ ಬಣ್ಣದ ಕುದುರೆ ಹಾರುತಿಹುದು ರಾತ್ರಿ ಕಂಡ ಬಾವಿ.


ಭಾಮೆಯೋ ರಾಧೆಯೋ ಕೃಷ್ಣ ಪ್ರೀತಿಯಣ್ಣೆಯ ಕಿಣ್ಣ 
ಬತ್ತಿ ಬದಲಿದರೇನು ಬೆಳಕು ಬದಲಿಸದು ಬಣ್ಣ 
ಒಲವ ಕಡಲಿನ ಒಳಗೆ ಸುಖ ದುಃಖ ಶೀತೋಷ್ಣ 
ಮಿಂಚು ಗುಡುಗಿನ ನಡುವೆ ಪ್ರೇಮ ಅಪ್ಪಟ ಕೃಷ್ಣ

3 comments:

  1. ondu provdatheya kavanavanna naanivathu nodde sir
    swalpa kadme aithu antha ansthu but aadru thumba chanagide

    ReplyDelete
  2. ಕೆಲವೊಂದು ವಿಶಿಷ್ಟ ಪದಗಳನ್ನ ಇಟ್ಕೊಂಡೇ ಕವನ ಕಟ್ಟಿ ಬಿಟ್ಟಿದ್ದೀಯಲ್ಲಪ್ಪ..!!

    ReplyDelete
  3. ಚೆನ್ನಾಗಿದೆ ಶ್ರೀ :)..

    ReplyDelete