Wednesday, December 12, 2012

ಇರಕ್ಕಾಗದಿಲ್ಲೆ ಹೋಗಕ್ ಹರಿಯದಿಲ್ಲೆ

" "

 ಕಂಡಾಪಟ್ಟೆ  ಅನ್ನುವಂತ ಸಂಬಳ ಏನ್ ಬರೋದಿಲ್ಲ. ಅಷ್ಟಕ್ಕೂ ನಾವ್  ಕಾಲೇಜ್ ಅಲ್ಲಿದ್ದಾಗ ಕನಸು ಕಂಡ ಐದಂಕಿ ಸಂಬಳವೇ ಬಂದ್ರು ಬೆಂಗಳೂರು ಲೆವೆಲ್ಲಿಗೆ ಇವೆಲ್ಲ ಬುರ್ನಾಸು ಅಂತ ಅಂದಾಜಾಗಿ ಹೋಗಿದೆ .ಸಾಗರದಲ್ಲಿ ಬರುವ ನಾಕೆ ಅಂಕಿಯ ಸಂಬಳದಲ್ಲಿ ಇದಕ್ಕಿಂತ ಸುಖವಾಗಿ ಬದುಕಬಹುದು ಹೇಳೆಲ್ಲ ಗೊತ್ತಿದ್ರು ಕೂಡ "ಇರಕ್ಕಾಗದಿಲ್ಲೆ  ಹೋಗಕ್ ಹರಿಯದಿಲ್ಲೆ  ".!!

ಒಂದು ರುಪಾಯಿ ಬಾಡಿಗೆ ಕೊಡದೆ ಸಿಗುವ (ಇರುವ ) ದೈದಾಳ ಮನೆಯಲ್ಲಿ  ಮದ್ಯಾನ ಸೈತ  ಮನ್ಕ್ಯಂಡು  , ಮನಸು ಕಂಡಾಗ ಕವಳ  ಹಾಕಿ  ದಿನ ಎರಡೆರಡು  ತಾಸ್  ಕ್ರಿಕೆಟ್  ಆಡಿ , ಈ ಶರ್ಟ್  ಹಾಕಿರೆ ಹೊಟ್ಟೆ  ಕಾಣ್ತನ  ,ಈ ಶರ್ಟ್  ಹಾಕಿರೆ ಹೊಟ್ಟೆ  ಕಾಣ್ತನ  ಹೇಳುವ ಕೇಳುವ ಪ್ರಶ್ನೆಯೇ  ಇಲ್ಲದ ದಿಲ್ದಾರ್ ಬದುಕು ಅದರೂ  "ಇರಕ್ಕಾಗದಿಲ್ಲೆ  ಹೋಗಕ್ ಹರಿಯದಿಲ್ಲೆ  ".!!

ಬೆಳಗೆ ನಿದ್ದೆ ಮುಗದ್ ಮೇಲೇ  ಎದ್ದು  ಜೀವವಿರುವ  ದನದ  ಜೊತಿಗೆ ಕೆಲಸ ಮಾಡಿ  ದೋಸೆ ತಿಂದು ಪೇಪರ್ ಓದಿ , ನಮ್ಮನೆ ತೋಟ ನಮ್ಮನೆ ಗದ್ದೆ ಹೇಳಿ ಓಡಾಡಿ , "ಹೊತ್ತಾತು  ಸ್ನಾನ ಮಾಡ ಹಂಗಾರೆ" ಹೇಳುವ ಅಪ್ಯಾಯಮಾನ ಗದರುವಿಕೆ  ಕೇಳಿ , ಕರೆಂಟು  ಬಿಲ್ಲಿನ , ನೀರ ಕೊರತೆಯ ಚಿಂತೆ ಇಲ್ಲದೆ  ಒಂದು ಹಂಡೆ ನೀರಿನ ಸ್ನಾನ ಮಾಡಿ ಗಡದ್ದಾಗಿ  ಹೊಡೆಯುವ ಊಟದ ನೆನಪು ಕಾಡಿರೂವ   "ಇರಕ್ಕಾಗದಿಲ್ಲೆ  ಹೋಗಕ್ ಹರಿಯದಿಲ್ಲೆ .!!

ದುಡ್ಡು ಸುಖದ ಅರ್ಥವನ್ನೇ ಬದಲಿಸಿ ಕುಂತಿದ್ದು !!

6 comments:

  1. Gunda theme cholo iddu.... :) ishta aatu... "ಇರಕ್ಕಾಗದಿಲ್ಲೆ ಹೋಗಕ್ ಹರಿಯದಿಲ್ಲೆ .!! idantoo nijavaada maatu...!! kaagunitada kade gamana irali heladu ondu salahe...

    ReplyDelete
  2. ದೋಸೆ ಎಲ್ಲಿ ಮಾಡಿದ್ರೂ ತೂತೇ! ನಾವು ಕಾಲೂರುವ ಜಾಗ ಮತ್ತು ವರ್ತಮಾನ ಕಾಲ ಶ್ರೇಷ್ಠ. ಇದು ಅಭಿಪ್ರಾಯ ಮತ್ತೆ. ಹೇಳಿದ್ದೆಚ್ಚಾದ್ರೆ ತಪ್ಪಾತಪಾ ತಿದ್-ಕ್ಯತಿ...!

    ReplyDelete
  3. ಸಾಲಿನಲ್ಲಿ ನೈಜ ಜೀವನದ ಚಿತ್ರಣ.ಮನದಾಳದ ಮಾತು ಎಲ್ಲರ ಜೀವನದ ಬವಣೆಯನ್ನು ಒಂದೇ ಸಾಲಿನಲ್ಲಿ ಹೇಳಿದ್ರಿ...😊

    ReplyDelete
  4. ಸಾಲಿನಲ್ಲಿ ನೈಜ ಜೀವನದ ಚಿತ್ರಣ.ಮನದಾಳದ ಮಾತು ಎಲ್ಲರ ಜೀವನದ ಬವಣೆಯನ್ನು ಒಂದೇ ಸಾಲಿನಲ್ಲಿ ಹೇಳಿದ್ರಿ...😊

    ReplyDelete
  5. ಅದಂತೂ ನಿಜ.. ಸೂಪರ್ ಯಜಮಾನರ್ರೆ ��

    ReplyDelete