Sunday, January 29, 2012

ಜೀವನದಿ!

ಗಂಗೆಯಾಗಿ ಬಿಡಬೇಕು !!

ನಿನ್ನೆದೆಯ  ಗೋಪುರದಿ ನನ್ನೆಲ್ಲ ಪ್ರಜ್ಞೆಗಳ ಕಳಚಿ
ತೊನೆದು ತೊಳೆದು ಭೋರ್ಗರೆಯುವ ಅಲಕನಂದೆಯಂತೆ.

ನಿರ್ಜೀವ ದೇಹ ದಾಹವಿಲ್ಲದೆ ಮುಳು ಮುಳುಮುಳುಗಿ ಏಳುವಾಗ
ಸಂಬಂಧಗಳ ನೆನಪು ಭಸ್ಮದ ಹೆಸರು ಹೊತ್ತು ತೊಳೆದಳಿದು ಹೋಗುವಂತೆ
ನಾ  ನಿನ್ನರಿವ ಅಸ್ಮಿತೆ ಕುಡಿದು ಗಮಿಸುವ ಮನ್ದಾಕಿನಿಯಾಗಿಬಿಡಬೇಕು.

ದಿಕ್ಕೆಡಿಸಿ ಸೇರುವ ಆ ಭಾವ ಗಂಡಕಿ , ಬಿಕ್ಕಳಿಸಿ ಬಿಕ್ಕಳಿಸಿ ನಾ ಲೋಚನವಾರಿ
ವಯ್ಯಾರಿಯಾಗಿ, ನಾ ಭಾಗಿಯಾಗಿ ,ಕುಡಿದು ತುಪ್ಪಿದ ಜಾನುವಿಗೆ ನಾನೆಂಜಲಾಗಿ
ನನ್ನರುವಿನೊಳಗೆ ನೀ ಸಹನವಾಗಿ  ,ಎಲ್ಲ ಮರೆತು ಹರಿಯುವ ಜಾಹ್ನವಿಯಂತೆ

ಪಾಪ  ತೊಳೆಯುವ, ಪಾಪಿಯಾಗದ , ಶಂತನುವರಿಯದ ಗಂಗೆಯಂತೆ
ಎಲ್ಲ ಕೊಳಕಿನೊಳಗಿಂದ ಎದ್ದು ಬರುವ ದೇವನದಿಯಾಗಬೇಕು.







8 comments:

  1. ಶಂತನುವರಿಯದ ಆಗಬೇಕು. ಚಂದ ಇದ್ದು ಕವನ :)

    ReplyDelete
    Replies
    1. ತಿದ್ದಿಕೊಂಡಿದ್ದೇನೆ,ಥ್ಯಾಂಕ್ಯು ಅಪ್ಪಚ್ಚಿ :)

      Delete
  2. ರಾಶೀ ಮನೋಜ್ನವಾಗಿ ಬರದ್ದೆ...ಶ್ರೀಪಾದು..ಚೆನ್ನಾಗಿದ್ದು..

    ReplyDelete
  3. ಮಹಾನ್ ಕವಿ ಆಗೋದ್ಯಲ ಗುಂಡ... :) good keep it up... :)

    ReplyDelete
  4. ಕಾವ್ಯ , ಮೇಧಾ
    ಮರ ಹತ್ತಿ ಕುಂತಿಗಿದಿ ;)..ಥ್ಯಾಂಕ್ಸ್ :)

    ReplyDelete
  5. ಚೊಲೋ ಇದ್ದು ಕವನ, ಮತ್ತು ಹಿಂದಿನವೂ ಕೂಡಾ

    ReplyDelete