Sunday, August 5, 2012

ವಿಷಕನ್ಯೆ

ವಿಷಕನ್ಯೆ ಅಂತ ಬರತ್ತಲ ಭಾರತದ ಪುರಾಣ ಪುಣ್ಯ ಕಥೆಗಳಲ್ಲಿ .ಆ ವಿಷಕನ್ಯೆ ನೋಡೋದಿಕ್ಕೆ ಅದ್ಭುತವಾಗಿರ್ತಿದ್ಳಂತೆ ಅಥವಾ ಅದ್ಭುತವಗಿರೋರನ್ನೇ ವಿಷಕನ್ಯೆ ಮಾಡ್ತಿದ್ರು.ಏನು ಅಂತಂದ್ರೆ ರಾಜ ಮಹಾರಾಜರು ತಮ್ಮ ಎದುರಾಳಿಗಳನ್ನ ಕೊಲ್ಲೋಕೆ ಇವರನ್ನ ಕಳಿಸ್ತಿದ್ರು.ಇವರ ಜೊತೆಗೆ ಏನಾದರೂ ವಿರೋಧಿ ದೇಶದ ರಾಜ ಮಲಗಿದ ಅಂತಂದ್ರೆ ಆತ ಕತೆ ಮುಗಿಯಿತು.ಪ್ರಣಯದಾಟ ಮುಗಿಯುವ ಮುಂಚೆಯೇ ಈತನ ಇಹಲೋಕದಾಟ ಕೊನೆಗೊಂಡಿರುತ್ತಿತ್ತು.

ಸರಿ ಇವರು ವಿಷಕನ್ಯೆ ಹೇಗಾಗ್ತಿದ್ರು ಹಾಗಾದ್ರೆ. ಒಂದು ಸುಂದರವಾದ ಹೆಣ್ಣು ಹಸುಗೂಸನ್ನ ರಾಜರು ದತ್ತು ತೆಗೆದುಕೊಂಡು ಅವರಿಗೆ ನಿಯಮಿತ ಪ್ರಮಾಣದ ಪಾದಸರಸವನ್ನ ದೇಹಕ್ಕೆ ಕೊಡ್ತಿದ್ರಂತೆ(ಯಾವ ತರ ಅಂತ ಗೊತ್ತಿಲ್ಲ)( taken on recommendation of medical practitioner).ಅವರ ದೇಹ ಹಾಗಾಗಿ ವಿಷಪೂರಿತವಾಗುತ್ತಿತ್ತು.

ಕೊಲ್ಲೋಕೆ ಮನುಷ್ಯ ಎಂಥೆಂಥಾ ವಿಧಾನಗಳನ್ನ ಹುಡುಕ್ತಿದ್ದ ನೋಡಿ

5 comments:

  1. ತುಂಬ ಜಾಣ ಆಗಿಬಿಟ್ಟಿದ್ದಿರಾ ಶ್ರಿ :)

    ReplyDelete
  2. arey..!! allinda hudkakke shuru madidde idnella..!! :P

    ReplyDelete
  3. ಪಾದರಸನಾ? ಹಾವಿನ ವಿಷ ಅಂತ ಎಲ್ಲೋ ಓದಿದ್ದೆ ನಾನು !!

    ReplyDelete
  4. ಇರಬಹುದು., ನೆನಪಿನ ಆಧಾರದ ಮೇಲೆ ಬರದದ್ದು. :)

    ReplyDelete
  5. ಕಂಬಾರರ 'ಶಿಖರ ಸೂರ್ಯ'ದಲ್ಲಿ ವಿಷಕನ್ಯೆಯರ ಪ್ರಸ್ತಾಪ ಬರುತ್ತೆ ನೋಡಿ... ಅಲ್ಲೀವರೆಗೂ ನಂಗೆ ಗೊತ್ತಿರ್ಲಿಲ್ಲ, ಅವ್ರು ಬಹುಷಃ ಹಾವಿನ ಸಂತತಿ ಇರಬಹುದೇನೋ ಅಂತ ಅಂದ್ಕೊಂಡಿದ್ದೆ...!
    - ಪ್ರವೀಣ್

    ReplyDelete