ಎಲ್ಲರಿಗೂ ಮನಸಿಹುದು
ಬೆಲ್ಲ ಸವಿಯಲು ,ಗೆಳತಿ ,
ನಿನ್ನ ಲಲ್ಲೆಗೆರೆಯಲು .
ಗಟ್ಟಿಗರು ಎಷ್ಟಿಹರು
ಆಲೆ ಕಟ್ಟಲು ,ಗೆಳತೀ ;
ಒಲವು ಜೋಡಿ ತೊಟ್ಟಿಲು
ಬಿಸಿಬೆಲ್ಲ ,ಜೋನಿಯನು
ಬಯಸುವುದು ಪ್ರತಿರಸನೆ
ಗೆಳತೀ , ಕಾವಿಳಿದ ಮೇಲೆ
ತಾನೇ ಬಣ್ಣ ಕರಿಯು
ಬಾಣಸಿಗರೆಷ್ಟಿಹರು ಹಳೆ-
ಬೆಲ್ಲವ ಗುಳ ಮಾಡಲು
ಗೆಳತೀ , ಒಲವು
ಸಾವಿರದ ಮೆಟ್ಟಿಲು
ಬೆಲ್ಲ ಸವಿಯಲು ,ಗೆಳತಿ ,
ನಿನ್ನ ಲಲ್ಲೆಗೆರೆಯಲು .
ಗಟ್ಟಿಗರು ಎಷ್ಟಿಹರು
ಆಲೆ ಕಟ್ಟಲು ,ಗೆಳತೀ ;
ಒಲವು ಜೋಡಿ ತೊಟ್ಟಿಲು
ಬಿಸಿಬೆಲ್ಲ ,ಜೋನಿಯನು
ಬಯಸುವುದು ಪ್ರತಿರಸನೆ
ಗೆಳತೀ , ಕಾವಿಳಿದ ಮೇಲೆ
ತಾನೇ ಬಣ್ಣ ಕರಿಯು
ಬಾಣಸಿಗರೆಷ್ಟಿಹರು ಹಳೆ-
ಬೆಲ್ಲವ ಗುಳ ಮಾಡಲು
ಗೆಳತೀ , ಒಲವು
ಸಾವಿರದ ಮೆಟ್ಟಿಲು
No comments:
Post a Comment