ಹೀಗೆ ಪ್ರೇಮದ ನೆನಹುಗಳ ಮೇಲೆ ಕುಳಿತು ,ಇತಿಹಾಸದ ಪುಟಗಳನ್ನ ಕವಚುತ್ತಾ ಹೋದರೆ ಡಣ್ಣನೆ ಮುಖಕ್ಕೆ ರಾಚುವ ಸತ್ಯ., ಪ್ರೀತಿಗೆ , ಪ್ರೇಮಕ್ಕೆ ಹುಡುಗಿಯರ ಕಾಣಿಕೆ ಸೊನ್ನೆ.ಯೋಚನೆ ಮಾಡಿ ., ಪ್ರೇಮ ವೈಫಲ್ಯ ಅಂದ್ರೆ ತಕ್ಷಣ ದೇವದಾಸ ನೆನಪಾಗ್ತಾನೆ.,ಪಾರು ಮದ್ವೆ ಆಗಿ settle ಅಗಿಬಿಡ್ತಾಳೆ.ಹಾಗಾದರೆ ಈ ಹುಡ್ಗೀರಿಗೆ ಪ್ರೇಮ ಲವ್ವು ಇವೆಲ್ಲ ಸುಮ್ಮನೆ ಆಟದ ಸಮಾನುಗಳೇ??.ಒರಿಜಿನಲ್ ಲವ್ವು ಹೇಳದು ಇಲ್ಲವೇ ಇಲ್ಯೇ??.
ಯಾವ್ದಾರು ಹುಡುಗಿ ಜೊತೆ ಜಗಳ ಮಾಡಿ ಪಲ್ಟಿ ಹೊಡೆಸ್ಬೇಕು ಅಂದ್ರೆ ಹಿಂಗೆ ಮಾತಾಡಿ.ಆಮೇಲೆ ಆ ಹುಡುಗಿ ಸಮಾಧಾನ ಮಾಡಕ್ಕೆ ನಿಮಗೆ ಏಳು ಹನ್ನೊಂದು ಆದರೆ ನನಿಗ್ ಗೊತ್ತಿಲ್ಲ ಅಷ್ಟೇ.
basically , ಪ್ರೀತಿಸಿದಷ್ಟು ಕಾಲ , ಪ್ರೀತಿ ಸತ್ಯವೇ ಆಗಿರುತ್ತದೆ.ಸ್ವಲ್ಪ ಕನ್ಫ್ಯೂಸ್ ಅಲ ?? ಹೇಳ್ತೀನಿ ತಾಳಿ.
ಮೂಲತಃ ಅದು , ಅಹಂಕಾರವನ್ನ ಪೋಷಿಸುವ ಮತ್ತು ಪೋಷಿಸಿಕೊಳ್ಳುವ ಭಾವ.ಒಂದು ಹುಡುಗಿ ., ಕೈ ಕೊಟ್ಟು ಹೋದಳು ಎಂದಾಗ ., ಅಥವಾ ತಿರಸ್ಕರಿಸಿದಳು ಅದು ಹುಡುಗನ ಅಹಂಕಾರಕ್ಕೆ ಬೀಳುವ ಪೆಟ್ಟಾಗಿರುತ್ತದೆ.ಆ ಪೆಟ್ಟನ್ನ ತುಂಬಿಕೊಳ್ಳುವ ಸಲುವಾಗಿ , ಹುಡುಗ ಅನುಕಂಪದ ಮೊರೆ ಹೋಗುತ್ತಾನೆ.ಬಹಿರಂಗವಾಗಿ ತೋರಗೊಡುತ್ತಾನೆ.ಕುಡಿತ ಧೂಮಪಾನ ಇವುಗಳ ಮೂಲಕ ಸಮಾಜದ ಗಮನ ಬೇಡುತ್ತಾನೆ.ಕೈಗೆ ಸಿಗದ ಹುಡುಗಿಯನ್ನ ಬಯ್ಯುವ ಮೂಲಕ ತನ್ನ ಅಹಮಿಕೆಗೆ ಆದ ನೋವನ್ನು ತುಂಬಿಕೊಳ್ಳುತ್ತಾನೆ.ಬಹುಶಃ ಪುರುಷ ಪ್ರಧಾನ ವ್ಯವಸ್ತೆ ಆಗಿದ್ದರಿಂದ ಆತನ ಆ ಎಲ್ಲ ಡ್ರಾಮಾಗಳಿಗೆ ಬೆಲೆ ಸಿಗುತ್ತದೆ.ಅಹುದಹುದೆನ್ನಲು ಒಂದಿಷ್ಟು ಜನ ಕೂಡ.public affection of attraction ನಮ್ಮ ಮೂಲ ಗುಣಗಳಲ್ಲಿ ಒಂದು ಅಷ್ಟಕ್ಕೂ.
ಹುಡುಗಿಯರಿಗೆ ಹಾಗಾದ್ರೆ ., ಲವ್ವಿನ ಫೀಲಿಂಗ್ ಬರೋದೆ ಇಲ್ವೆ.ಅಥವಾ ಅವರು ಬೇಜಾರೆ ಆಗೋಲ್ವೇ?? ಯಾಕೆ ಇತಿಹಾಸದ ಪುಟಗಳಲ್ಲಿ ,ವರ್ತಮಾನದ ವಾರ್ತೆಗಳಲ್ಲಿ ., ಲವ್ ಫೈಲ್ಯುರ್ ಆಗಿ ಮಕಾಡೆ ಮಲಗಿದ ಹುಡುಗಿಯರು ಸಿಗದೇ ಇಲ್ಲ.ಅಥವಾ ಭಾಳ ಕಮ್ಮಿ??
ಅದಕ್ಕೆ ಕಾರಣಗಳು ಹಲವಾರು., ಹುಡುಗಿಗೆ ಮನೆತನದ ಘನತೆ- ಗೌರವಗಳು ಪ್ರೇಮಕ್ಕಿಂತ ಯಾವತ್ತೂ ಹೆಚ್ಚು ಹೇಳುವ ಮನೋಭಾವವನ್ನ ತುಂಬಲಾಗಿರುತ್ತದೆ.ಮಾನಸಿಕವಾಗಿ ಗಂಡಿನಷ್ಟು ಸಮರ್ಥಳಲ್ಲದ ಕಾರಣ ., ಆ ತರದ ರಿವಾಜುಗಳನ್ನ ಮೀರಿ ನಡೆಯಲು ಬಹಳಷ್ಟು ಕೇಸ್ ಗಳಲ್ಲಿ ಸೋಲುತ್ತಾಳೆ.
ಮತ್ತೆ., ಇಲ್ಲ ಆತನ ಮರೆಯುವುದು ಸಾಧ್ಯವೇ ಇಲ್ಲ ., ನಾನು ಹೀಗೆ ಇದ್ದುಬಿಡುತ್ತೇನೆ ಎಂಬ ನಿರ್ಧಾರ ಮಾಡಿದರೂ ತನ್ನ ಮನೆ ಇದ್ದದ್ದು ನಿಧಾನವಾಗಿ "ಅತ್ತಿಗೆಯ" ಮನೆಯಾಗುವುದು., ಓರಗೆಯ ಹುಡುಗಿಯರ ,ಗೆಳತಿಯರ ಮಕ್ಕಳ ಚಿನ್ನಾಟದ ಮುಂದೆ ., ನಿರ್ಧಾರಗಳ ತಾಯಿಬೇರು ಜೀವ ಕಳೆದುಕೊಳ್ಳುತ್ತದೆ.ಅದಕ್ಕೆ ., ಲವ್ವು ಮಾಡಿದಷ್ಟು ಕಾಲ ಮಾತ್ರ ಸತ್ಯ., ಆಮೇಲೆ ಬರೀ ನೆನಪಷ್ಟೇ.
ನಂಗೆ ಅನ್ಸಿದ್ದೆಲ್ಲ ಸರೀ ಇರ್ಬೇಕು ಅಂತೆ ರೂಲ್ಸ್ ಏನಿಲ್ಲ ಬಿಡಿ:)

ಗುಂಡೋಪನಿಷತ್ನ ಮುಂದುವರೆದ ಭಾಗ... :) ಕಡ್ಮೆ ಆತು ಬರದ್ದು !
ReplyDeleteಒಳ್ಳೆ ಪ್ರಯತ್ನ ಗುಂಡ... :) ಭಾಷೆ ಅತ್ಲಾಗೆ ನಮ್ಮ ಕನ್ನಡನು ಅಲ್ಲ ಇತ್ಲಾಗೆ ಪ್ಯಾಟೆ ಕನ್ನಡನು ಅಲ್ಲ ಹಾಂಗಾಯ್ದು... ಅದ್ನ ಸರಿ ಮಾಡ್ಕ್ಯ ಮುಂದಿನ ಸಲ ಬರ್ಯಕರೆ.... :)
ReplyDelete-----
ಇನ್ನು ವಿಷಯದ ಬಗ್ಗೆ ಹೇಳುವುದಾದರೆ......
ಹುಡುಗರು ಪ್ರೇಮ ವಿಫಲವಾಗಿದ್ದೇ ಜನರ ಸಹಾನುಭೂತಿ ಬಯಸುವುದು ನಿಜವಾದ ಮಾತು... ಬೇರೆಯವರ ಸಹಾನುಭೂತಿಯಿಂದ ತಮ್ಮ ದುಃಖವನ್ನು ಮರೆಯಲು ಪ್ರಯತ್ನಿಸುವುದೇಕೆ ಎಂಬುದೇ ಯಕ್ಷ ಪ್ರಶ್ನೆ...! ಮನಸ್ಸನ್ನು ಗಟ್ಟಿ ಮಾಡಿಕೊಂಡು ನನ್ನಿಂದ ಮರೆಯಲು ಸಾಧ್ಯ ಎಂದು ಪಣ ತೊಟ್ಟರೆ ಆಗದೆ ಇರುವುದು ಯಾವುದೂ ಇಲ್ಲಾ...!
ಹುಡುಗಿಯರಿಗಿಂತ ಹುಡುಗರ ಮನಸ್ಸು ಮೃದುವಂತೆ ಈ ವಿಷಯದಲ್ಲಿ... ಹುಡುಗಿಯರು ಹಚ್ಚಿಕೊಂಡವರನ್ನು ಬಿಡಲು ಕಷ್ಟ ಪಡುತ್ತಾರೆ ನಿಜ, ಆದರೆ ಹುಡುಗರಷ್ಟಲ್ಲ... ಹುಡುಗರು ಒಮ್ಮೆ ಹಚ್ಚಿಕೊಂಡರೆ ಮತ್ತೆ ಮರೆಯಲು ತುಂಬಾ ಕಷ್ಟ ಪಡುತ್ತಾರೆ... ಅದರಲ್ಲೂ ಮೊದಲಿನಿಂದ ಯಾವ ಹುಡುಗಿಯ ಸುದ್ದಿಗೂ ಹೋಗದೆ ತನ್ನ ಪಾಡಿಗೆ ಓದು, ಗುರಿ ಎಂದು ಇದ್ದುಬಿಟ್ಟ ಹುಡುಗರು ಏಕಾಏಕಿ ಪ್ರಥಮ ಪ್ರೇಮ ವಿಫಲವಾದಾಗ ಜರ್ಜರಿತರಾಗುತ್ತಾರೆ... totally ಪ್ರೇಮದ ವಿಷಯದಲ್ಲಿ ಹುಡುಗಿಯರು ಹುಡುಗರಿಗಿಂತ ಗಟ್ಟಿ....
ಇನ್ನು ಹುಡುಗಿ ಅಷ್ಟು ಪ್ರೀತಿಸಿದ ಹುಡುಗನನ್ನು ಬಿಟ್ಟು ಹೋಗಲು ಕೆಲವು ಕಾರಣಗಳು:
* ಹುಡುಗಿಯರು ಮನೆಯವರ ನಿರ್ಧಾರಕ್ಕೆ ಬೆಲೆ ಕೊಡುವುದು ಹೆಚ್ಚು... ಮನೆಯವರು ಒಪ್ಪುವುದೇ ಇಲ್ಲಾ, ಬಹಳಷ್ಟು ನೊಂದುಕೊಳ್ಳುತ್ತಾರೆ ಎಂದು ತಿಳಿದಾಗ ಹೆಜ್ಜೆ ಹಿಂದಿಡುವವರು ಹಲವರು.... ಇಲ್ಲಿ ನೀವು ಅದು ಗೊತ್ತಿದ್ದ ಮೇಲೆ ಯಾಕೆ ಪ್ರೀತಿ ಮಾಡಬೇಕಿತ್ತು ಕೇಳಬಹುದು..! ಪ್ರೀತಿ ಮಾಡುವುದಲ್ಲ ಆಗುವುದು...! without their knowledge they fall into love & uncontrollably, either EXPRESS it or ACCEPT it...!
* ತನ್ನನ್ನು ಇಷ್ಟು ವರ್ಷದಿಂದ ಪ್ರೀತಿಸಿದ, ಓದಿಸಿದ, ಬೆಳೆಸಿದ ಮನೆಯವರನ್ನು ತೊರೆದು ಈಗ ಪ್ರೀತಿ ಕೊಟ್ಟವನೊಡನೆ ಬರಲಾಗದಿರುವುದು... ಆದ ಕಾರಣ ಮಾಡುವ ತ್ಯಾಗ... ಹೆಣ್ಣು ತನ್ನಿಂದ ಬೇರೆಯವರು ನೋವು ಪಡುವುದನ್ನು ನೋಡಲಾರದೆ ಹುಡುಗನನ್ನು ತ್ಯಜಿಸುತ್ತಾಳೆ...ಇಲ್ಲಿ ಒಬ್ಬನ ನೋವಿಗಿಂತ ಎಲ್ಲರ ನೋವು ದೊಡ್ಡದು... ಅದಕ್ಕಾಗಿ ತನ್ನ ನೋವನ್ನು ಅವಳು ತುಟಿ ಕಚ್ಚಿ ಸಹಿಸಿದ್ದಕ್ಕೆ ಸಿಗುವ ಬಿರುದು "ಕೈ ಕೊಟ್ಟು ಓಡಿ ಹೋದಳು" ಎಂದು ಹುಡುಗ ಎಲ್ಲರೊಡನೆ ಹೇಳಿಕೊಳ್ಳುವುದು ಅಲಿಯಾಸ್ ಅವನ ಗೋಳನ್ನು ತೋಡಿಕೊಳ್ಳುವುದು...
ಇದನ್ನು ಹೊರತು ಪಡಿಸಿದರೆ ಇನ್ನು ಬೇರೆ ರೀತಿಯ ಹುಡುಗಿಯರೇ ಇರುತ್ತಾರೆ. ಅವರಿಗೇ ಆಗಾಗ ಒಬ್ಬೊಬ್ಬರೊಡನೆ ತಿರುಗುವ ಖಯಾಲಿ.. ಅವರ reasoning ಬೇರೆಯ ಥರವೇ ಇರುತ್ತದೆ....
* ನಾನು ಬಂದಿದ್ದು ಕೇವಲ ಡೇಟಿಂಗ್-ಗಾಗಿ ಅದು ಮುಗಿಯಿತು ಹೋಗುತ್ತೇನೆ...!
* ಲೈಫ್ ಅಲ್ಲಿ ಎಂಜಾಯ್ ಮಾಡಬೇಕು, ಆರಾಮಾಗಿ flirt ಮಾಡಬೇಕು.... ಸುತ್ತಾಡಿಕೊಂಡು ಹಾಯಗಿರಬೇಕು...
* ನಾನು ಪ್ರೀತಿಸುತ್ತೇನೆ ಎಂದು ಹೇಳಿಯೇ ಇಲ್ಲಾ ಅಂದ ಮೇಲೆ ಬಿಟ್ಟು ಹೋಗುವುದೆಲ್ಲಿಂದ... ಅವನೇ ಏನೇನೋ ತಿಳಿದುಕೊಂಡರೆ ನನೆಳು ಮಾಡಲಿ...!!
ಹೀಗೆ ಎಲ್ಲಾ ರೀತಿಯಿಂದಲೂ ಹುಡುಗರು-ಹುಡುಗಿಯರು ಬದಲಾಗಿದ್ದಾರೆ... ಈ ಎರಡನೇ category ಹುಡುಗಿಯರಿಗೆ ನಿಜಕ್ಕೂ ಪ್ರೀತಿಸುವ ಹುಡುಗ ಸಿಕ್ಕರೆ ಮಾತ್ರ ಅವನು ಮುಂದೆ ಗಡ್ಡ ಬಿಡುವ ಹಾಗೇ ಆಗುತ್ತದೆ...! ಇನ್ನು ಮೊದಲ category- ಯಲ್ಲಿ ಹುದುಗಿಯರದು ತಪ್ಪಿಲ್ಲ.... ಅನಿವಾರ್ಯತೆ ಹಾಗೇ ಮಾಡಿಸಿದೆ.. ಅವರಿಗೂ ಪ್ರೀತಿಯಿದೆ ಆದರೆ ತ್ಯಾಗ ಮಾಡಿರುತ್ತಾರೆ ಅಂತಹ ಪರಿಸ್ತಿತಿಯಲ್ಲಿ ಹುಡುಗರು ಅರ್ಥ ಮಾಡಿಕೊಳ್ಳಬೇಕೆ ವಿನಃ ಆ ಹುಡುಗಿಯನ್ನು ಇಷ್ಟು ದಿನ ಪ್ರೀತಿಸಿದ್ದೆ, ಆರಾಧಿಸಿದ್ದೆ ಎಂಬುದನ್ನೂ ಮರೆತು ತಾನೂ ಹಾಳಾಗಿ ಅವಳ ಬಾಳನ್ನೂ ಹಾಳು ಮಾಡುವುದು ಸಲ್ಲ....!
----
ಕಿಣ್ಣ ಗುಂಡ ಇನ್ನೂ ಬರ್ಯಕಾಗಿತ್ತು ಅಂದ್ಯಲ, ನಾ ಮುಂದ್ವರ್ಸಿದ್ದಿ ನೋಡು... ;)
ಭರ್ಜರಿ ಬರದ್ಯಲೇ ಮಾರಾಯ್ತಿ.ಚನಾಗಿದ್ದು.ಹುಡ್ಗೀರ್ ವಿರೋಧ ಕಟ್ಕ್ಯಂಡು ಬದುಕು ಮಾಡಲಾಗ್ತನೆ;)
ReplyDeleteಗುಂಡಾ, ಚೆನ್ನಾಗಿದ್ದು ಬರದ್ದು.. ಕಿಣ್ಣಣ್ಣ ಹೇಳಿದಂಗೆ - "ಇನ್ನೂ ಬರೀಲಾಗಿತ್ತು".
ReplyDeleteಕಾವ್ಯ ಸ್ವಲ್ಪ ಮಟ್ಟಿಗೆ ಮುಂದುವರೆಸಿದ್ದ.. ನೀ ಬರೆದ ಅರ್ಥವೇ ಬಪ್ಪಾ ಹಂಗೆ ಮತ್ತೊಮ್ಮೆ ಬರದ್ದ :) ಹೆಣ್ಣು ಸಮಯ ಸಾಧಕಳು ಅನ್ನೋದನ್ನ ಒಪ್ಪಿಕಂಡಿದ್ದ. ಲವ್ವು ಮಾಡದಲ್ಲ ಆಪದು.. lol..
ಕೆಲ್ಸ ಮಾಡ್ತಾ ಇಪ್ಪ ಕಂಪನಿ ಬಿಟ್ಟು ಇನ್ನೂ ಒಳ್ಲೇ ಸಂಬಳ ಕೊಡ ಕಂಪನಿಗೆ ಹೋಗದು ಎಲ್ಲಾ ಕಡೆ ನಡ್ಯ ವಿದ್ಯಮಾನ.. ಹುಡುಗರನ್ನು ಬದಲಾಯಿಸುವ ಆ ಎರಡನೇ ಕ್ಯಾಟೆಗರಿ ಹುಡುಗಿಯರನ್ನು ಹೀಗೆ ಹೇಳಲಕ್ಕಾ ?
"ಹದ್ದಿನ ಕಣ್ಣಿನ ಬಾಲೆ" .. :)
ಉಪಮೆ ಲಾಯ್ಕಿದ್ದೋ :D
ReplyDeleteಚೆನ್ನಾಗಿದ್ದು ಶ್ರೀಪಾದಣ್ಣ.. ಮಧ್ಯೆ ಸ್ವಲ್ಪ ಕನ್ಫ್ಯೂಷನ್ ಶುರು ಆತು. ಫಿಲಾಸಫಿ, ಲಾಜಿಕ್ಕು ಎಲ್ಲಾ ಇದ್ದು.. ಲಹರೀಲಿ ಓದ್ತಾ ಹೋಗ್ತಿದ್ದಂಗೆ ಇದ್ದಕ್ಕಿದ್ದಂಗೆ ಮುಗ್ದು ಹೋತಲ.. ಥೋ.. ಇನ್ನೂ ಬರೀಲಾಗಿತ್ತೋ :-)
ReplyDeleteಗುಂಡ ಸುಮ್ನೆ ಕೊರಗದ...ಯಾವಾಗಲೂ ನಮ್ಮ ಪ್ರೀತಿ ಫೇಲ್ ಆತು ಅಂತ ಹೇಳಲಾಗ ...ನನ್ನ ಪ್ರೀತಿಗೆ ಅವಳು ಲಾಯಕ್ಕಿಲ್ಲ ಅಂತಾನೆ ಹೇಳವು ...ಹಂಗೆ ಅವಳ ಎದ್ರಿಗೆ ಅವಳ ಫ್ರೆಂಡ್ ಗೂ ಪ್ರಪೋಸೆ ಮಾಡು ಅಥವಾ ಅವಳಿಗೆ ಕ್ಲೋಸ್ ಆಗಿ ಇರು...ಅವಳ ಮದ್ವೆ ಫಿಕ್ಸ್ ಆದರೆ ಎಲ್ಲರಿಗಿಂತ ಜಾಸ್ತಿ ನೀನ್ ಕುಶಿಪಡು... ಅವಳಿಗೆ ಕಂಗ್ರಾಟ್ಸ್ ಹೇಳು ...ಕೊನೆದಾಗಿ ಅವಳ ನೆನಪಲ್ಲಿ ದೇವದಾಸ್ ಆಗದೆ ಮತ್ತೊಬ್ಬಳನ್ನು ಪ್ರೀತಿಸು ... ಯಾವಾಗಲು ಪ್ರೀತಿ ಫೇಲ್ ಆಗ್ತಿಲ್ಲೆ ಅದನ್ನ ಒಪ್ಪಿಕೊಳ್ಳೋ ಹುಡುಗಿ ಮಾತ್ರ ಫೇಲ್ ಆಗ್ತು ... ಕ್ಯಾರಿ ಆನ್ ..
ReplyDeleteಪ್ರಶಸ್ತಿ , ವೆಂಕ..ತುಂಬಾ ಧನ್ಯವಾದ.ಖಂಡಿತಾ ಬರೆಯುವೆ.
ReplyDeleteವೆಂಕಣ್ಣಾ ಎಂಥ ಮಾತು!! :) ಸೂಪರ್!!!! ಗುಂಡಣ್ಣಾ ಚೊಲೊ ಬರದ್ದೆ :)
ReplyDeletebasically , ಪ್ರೀತಿಸಿದಷ್ಟು ಕಾಲ , ಪ್ರೀತಿ ಸತ್ಯವೇ ಆಗಿರುತ್ತದೆ!!! very good analysis!!! may be hudugirige gadda bandididre sumar jana hennu "devdas"galu kanale sigtidwana!! yarig gottu!! :P
ReplyDelete